ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡನ್‌ ವಿಶೇಷ ಸಹಾಯಕಿಯಾಗಿ ಭಾರತ ಮೂಲದ ತಜ್ಞೆ ನೇಮಕ

Last Updated 16 ಫೆಬ್ರುವರಿ 2021, 7:57 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತ ಮೂಲದ ಪ್ರೊನಿತಾ ಗುಪ್ತಾ ಅವರನ್ನುಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರ ಕಾರ್ಮಿಕರು ಮತ್ತು ಕೆಲಸಗಾರರ ದೇಶಿಯ ನೀತಿಗಳ ಮಂಡಳಿಯ ವಿಶೇಷ ಸಹಾಯಕಿಯಾಗಿ ನೇಮಕ ಮಾಡಲಾಗಿದೆ.

‘ಪ್ರೊನಿತಾ ಗುಪ್ತಾ ಅವರು ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪರಿಣತಿಯನ್ನು ಪಡೆದಿದ್ದಾರೆ. ಅಲ್ಲದೆ ಕಾರ್ಮಿಕರು ಮತ್ತು ಕೆಲಸಗಾರರ ಸಂರಕ್ಷಣೆ, ಕೆಲಸದ ಗುಣಮಟ್ಟ, ಕಡಿಮೆ ಆದಾಯವನ್ನು ಹೊಂದಿರುವ ಕಾರ್ಮಿಕರು ಮತ್ತು ಅವರ ಕುಟುಂಬದ ಆರ್ಥಿಕ ಭದ್ರತೆಯ ಸುಧಾರಣೆಗಾಗಿ ಶ್ರಮಿಸಿದ್ದಾರೆ’ ಎಂದು ಕಾನೂನು ಮತ್ತು ಸಾಮಾಜಿಕ ನೀತಿ ಕೇಂದ್ರ(ಸಿಎಲ್‌ಎಎಸ್‌ಪಿ) ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಸ್ತುತ ಪ್ರೊನಿತಾ ಗುಪ್ತಾ ಅವರು ಸಿಎಲ್‌ಎಎಸ್‌ಪಿಯಲ್ಲಿ ಉದ್ಯೋಗ ಗುಣಮಟ್ಟ ತಂಡದ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಮಾಜಿ ಅಧ್ಯಕ್ಷ ಒಬಾಮ ನೇತೃತ್ವದ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ಪ್ರಮುಖ ಹುದ್ದೆಯೊಂದನ್ನು ಹೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT