ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌: ಕಾಯಂ ಚಾನ್ಸೆಲರ್ ಆಗಿ ಭಾರತೀಯ ಮೂಲದ ಸೋನ್ಯಾ ಆಯ್ಕೆ

Last Updated 3 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಭಾರತೀಯ ಮೂಲದ ಖ್ಯಾತ ಶೈಕ್ಷಣಿಕ ನಾಯಕಿ ಡಾ.ಸೋನ್ಯಾ ಕ್ರಿಸ್ಟಿಯನ್ ಅವರು ಅಮೆರಿಕದ ಅತಿದೊಡ್ಡ ಶಿಕ್ಷಣ ಸಂಸ್ಥೆಯಾದ ಕ್ಯಾಲಿಫೋರ್ನಿಯಾ ಸಮುದಾಯ ಕಾಲೇಜುಗಳ ಕಾಯಂ ಚಾನ್ಸೆಲರ್ ಆಗಿ ನೇಮಕಗೊಂಡ ದಕ್ಷಿಣ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದಾರೆ.

73 ಜಿಲ್ಲೆ ಹಾಗೂ 116 ಕಾಲೇಜುಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾ ಕಮ್ಯುನಿಟಿ ಕಾಲೇಜ್‌ ಉನ್ನತ ಶಿಕ್ಷಣ ನೀಡುತ್ತಿರುವ ಕಾಲೇಜುಗಳ ಪೈಕಿ ರಾಷ್ಟ್ರದಲ್ಲೇ ಅತಿದೊಡ್ಡ ಸಂಸ್ಥೆಯಾಗಿದೆ. ಕ್ರಿಸ್ಟೈನ್ ಅವರನ್ನು 11ನೇ ಕಾಯಂ ಚಾನ್ಸೆಲರ್‌ ಆಗಿ ಫೆ.23ರಂದು ಕ್ಯಾಲಿಫೋರ್ನಿಯಾ ಸಮುದಾಯ ಕಾಲೇಜು ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಿತ್ತು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಸ್ಟೈನ್ ಅವರು ಕೇರಳ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಪಡೆದಿದ್ದು, ಗಣಿತದ ಅಧ್ಯಾಪಕರಾಗಿ ಮತ್ತು ನಂತರ ವಿಭಾಗದ ಅಧ್ಯಕ್ಷರಾಗಿ, ಕ್ಯಾಲಿಫೋರ್ನಿಯಾದ ಬೇಕರ್ಸ್‌ಫೀಲ್ಡ್ ಕಾಲೇಜಿನಲ್ಲಿ ವಿಜ್ಞಾನ, ಎಂಜಿನಿಯರಿಂಗ್, ಅಲೈಡ್ ಹೆಲ್ತ್ ಮತ್ತು ಗಣಿತಶಾಸ್ತ್ರದ ಡೀನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಳೆದ 30 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರಗಳ ಗುಣಮಟ್ಟ ಹಾಗೂ ಇಕ್ವಿಟಿ ಅಜೆಂಡಾಗಳಿಗೆ ಸಂಬಂಧಿಸಿದ ನೀತಿ ಮತ್ತು ನಿಯಮ ರೂಪಿಸುವುದರಲ್ಲಿ ಸಕ್ರಿಯರಾಗಿದ್ದಾರೆ. ಜುಲೈ 2021 ರಲ್ಲಿ, ಕ್ರಿಸ್ಟಿಯನ್‌ ಅವರನ್ನು ಕೆರ್ನ್ ಕಮ್ಯುನಿಟಿ ಕಾಲೇಜಿನ ಆರನೇ ಕುಲಪತಿಯಾಗಿ ನೇಮಕಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT