ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈತ್ಯ ಗ್ರೀಟಿಂಗ್ ಕಾರ್ಡ್ ರಚಿಸಿ ಗಿನ್ನಿಸ್ ದಾಖಲೆ ಬರೆದ ದುಬೈ ಮೂಲದ ಭಾರತೀಯ

Last Updated 3 ಜನವರಿ 2021, 3:52 IST
ಅಕ್ಷರ ಗಾತ್ರ

ದುಬೈ: 8.2 ಚದರ ಮೀಟರ್ ವಿಸ್ತೀರ್ಣದ ದೈತ್ಯ ಗ್ರೀಟಿಂಗ್ ಕಾರ್ಡ್ ( ಪಾಪ್-ಅಪ್ ) ರಚಿಸುವ ಮೂಲಕ ಭಾರತೀಯ ಮೂಲದ ದುಬೈ ನಿವಾಸಿ ರಾಮ್‌ಕುಮಾರ್ ಸಾರಂಗಪಾಣಿ, 19ನೇ ಬಾರಿಗೆ ಗಿನ್ನಿಸ್ ದಾಖಲೆಯನ್ನು ಬರೆದಿದ್ದಾರೆ.

ದುಬೈ ರಾಜ ಶೇಖ್ ಮೊಹಮ್ಮದ್ ಬಿನ್ ರಶೀದ್ ಬಿಲ್ ಮಕ್ತೌಮ್ ಅವರ 15ನೇ ಸಿಂಹಾಸನಾರೋಹಣ ದಿನದಂಗವಾಗಿ ರಾಮ್‌ಕುಮಾರ್, ದೈತ್ಯಕಾರಾದ ಆಕರ್ಷಕ ಗ್ರೀಟಿಂಗ್ ಕಾರ್ಡ್ ರಚಿಸಿದ್ದರು.

ದುಬೈ ನಿವಾಸಿ ರಾಮ್‌ಕುಮಾರ್ ಸಾರಂಗಪಾಣಿ ಯುಎಇ ಮೂಲದ ಭಾರತೀಯ ವಲಸಿಗನಾಗಿದ್ದು, ಈಗಾಗಲೇ ಅನೇಕ ವಿಶ್ವ ದಾಖಲೆಗಳನ್ನು ಬರೆದಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಸಾರಂಗಪಾಣಿಯ ಪಾಪ್-ಅಪ್ ಗ್ರೀಟಿಂಗ್ ಕಾರ್ಡ್, ಸಾಮಾನ್ಯ ಕಾರ್ಡ್‌ಗಳಿಗಿಂತಲೂ 100 ಪಟ್ಟು ದೊಡ್ಡದಾಗಿದೆ. ಇದರೊಳಗೆ ದುಬೈ ಮೂಲದ ಕಲಾವಿದ ಅಕ್ಬರ್ ಸಾಹೇಬ್ ರಚಿಸಿದ ವರ್ಣಚಿತ್ರಗಳ ಸಂಗ್ರಹವನ್ನು ಹೊಂದಿದೆ.

ಶೇಖ್ ಮೊಹಮ್ಮದ್‌ಗೆ ಸಮರ್ಪಿಸಿರುವ ಪಾಪ್-ಅಪ್ ಗ್ರೀಟಿಂಗ್ ಕಾರ್ಡ್ 8.20 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಈ ಹಿಂದಿನ ದಾಖಲೆಯು ಹಾಂಕಾಂಗ್‌ನಲ್ಲಿ ಸ್ಥಾಪಿಸಲಾದ ಗ್ರೀಟಿಂಗ್ ಕಾರ್ಡ್ 6.729 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿತ್ತು.

ಸಾರಂಗಿಪಾಣಿಯ ಕಾರ್ಡ್ 4 ಮೀಟರ್ ಉದ್ದ ಮತ್ತು 2.05 ಮೀಟರ್ ಅಗಲವನ್ನು ಹೊಂದಿದೆ. ಕಾರ್ಡ್‌ನ ಹೊರ ಕವರ್ ಎಕ್ಸ್‌ಪೋ 2020 ಗೆಲುವಿನ ಬಿಡ್‌ಗೆ ಅರ್ಹವಾಗಿದೆ ಎಂದು ವರದಿ ಮಾಡಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಸಾರಂಗಪಾಣಿ, ನಾನು ಕಳೆದ ಆರು ತಿಂಗಳಿನಿಂದ ಪಾಪ್-ಅಪ್ ಗ್ರೀಟಿಂಗ್ ಕಾರ್ಡ್ ರಚನೆಗಾಗಿ ತಯಾರಿ ನಡೆಸುತ್ತಿದ್ದೇನೆ. ಅಲ್ಲದೆ ದೇಶಕ್ಕೆ ಹೆಮ್ಮೆಯಾಗುವಂತೆ ದಾಖಲೆ ಮುರಿಯಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ಶೇಖ್ ಮೊಹಮ್ಮದ್ ಅವರ 15ನೇ ಸಿಂಹಾಸನಾರೋಹಣ ದಿನಕ್ಕಿಂತ ಶುಭ ಸಂದರ್ಭ ಬೇರೊಂದಿಲ್ಲ. ಇದನ್ನು ನಾನು ಯುಎಇನ 50ನೇ ರಾಷ್ಟ್ರೀಯ ದಿನಕ್ಕೆ ಅರ್ಪಿಸುತ್ತೇನೆ ಎಂದರು.

ಯುಎಇ ರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಜನವರಿ 4ರಿಂದ 18ರ ವರೆಗ ದೋಹಾ ಕೇಂದ್ರದಲ್ಲಿ ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಈ ಕಾರ್ಡ್ ಪ್ರದರ್ಶಿಸಲಾಗುವುದು.

ಅಂದ ಹಾಗೆ ಆಯಸ್ಕಾಂತಗಳನ್ನು ಬಳಸಿ ರಚಿಸಿದ ದೊಡ್ಡ ವಾಕ್ಯ, ಆಯಸ್ಕಾಂತಗಳನ್ನು ಬಳಸಿ ದೊಡ್ಡ ಪದ, ದೊಡ್ಡ ಎಲೆಕ್ಟ್ರಾನಿಕ್ ಗ್ರೀಟಿಂಗ್ ಕಾರ್ಡ್, ಸಣ್ಣ ಇಸ್ಪೀಟು ಕಾರ್ಡ್ ಇತ್ಯಾದಿ ದಾಖಲೆಗಳು ರಾಮ್‌ಕುಮಾರ್ ಹೆಸರನಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT