ಸಿಂಗಪುರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ಭಾರತೀಯ ಹೈಕಮಿಷನರ್

ಸಿಂಗಪುರ: ಸಿಂಗಪುರದ ಈಸ್ಟ್ ಕೋಸ್ಟ್ ಪಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಭಾರತದ ಹೈಕಮಿಷನರ್ ಪಿ. ಕುಮಾರನ್ ಅವರು ಗಿಡ ನೆಡುವ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿಗಳು ಹಾಗೂ ಭಾರತೀಯ ಸಮುದಾಯದ ಮುಖಂಡರು ಭಾಗಿಯಾಗಿದ್ದರು.
‘ಮರಗಳು ಎಲ್ಲರಿಗೂ ಪ್ರಿಯ. ಏಕೆಂದರೆ ಇಂಗಾಲವನ್ನು ಬೇರ್ಪಡಿಸುವ ಅತ್ಯಂತ ಪರಿಣಾಮಕಾರಿ ಸಾಧನಗಳಲ್ಲಿ ಮರಗಳು ಪ್ರಮುಖವಾಗಿವೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮಾಡಿದ ಈ ಪ್ರಯತ್ನದ ಬಗ್ಗೆ ನಮಗೆ ಸಂತೋಷವಿದೆ. ಇಂದು ನೆಟ್ಟಿರುವ ಗಿಡಗಳು ಸಿಂಗಪುರ – ಭಾರತ ನಡುವೆ ಬೆಳೆಯುತ್ತಿರುವ ಬಾಂಧವ್ಯದ ಸಂಕೇತ’ ಎಂದು ಪಿ. ಕುಮಾರನ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.