ಸೋಮವಾರ, ಮೇ 23, 2022
26 °C

ಯುಎನ್‌ಸಿಡಿಎಫ್‌: ಭಾರತೀಯ ಸಂಜಾತೆ ಪ್ರೀತಿ ಸಿನ್ಹಾ ನೇತೃತ್ವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಬಂಡವಾಳ ಅಭಿವೃದ್ಧಿ ನಿಧಿಯ (ಯುಎನ್‌ಸಿಡಿಎಫ್‌) ಭಾರತೀಯ ಮೂಲದ  ಹೂಡಿಕೆ ಮತ್ತು ಅಭವೃದ್ಧಿ ಬ್ಯಾಂಕರ್‌ ಪ್ರೀತಿ ಸಿನ್ಹಾ ಅವರನ್ನು ತನ್ನ ಕಾರ್ಯನಿರ್ವಾಹಕ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

ಯುಎನ್‌ಸಿಡಿಎಫ್‌ನ ಅತ್ಯುನ್ನತ ಹುದ್ದೆಯನ್ನು ಸಿನ್ಹಾ ಅವರು ಸೋಮವಾರ ಅಲಂಕರಿಸಿದರು. ಜುಡಿತ್‌ ಕಾರ್ಲ್‌ ಅವರ ನಿವೃತ್ತಿಯಿಂದ ತೆರವಾದ ಸ್ಥಾನ ಸಿನ್ಹಾ ಅವರಿಗೆ ದೊರೆತಿದೆ. ಕಾರ್ಲ್‌ ಅವರು ವಿಶ್ವಸಂಸ್ಥೆಯಲ್ಲಿ 30 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ.

1966ರಲ್ಲಿ ಸ್ಥಾಪನೆಯಾದ ಯುಎನ್‌ಸಿಡಿಎಫ್‌ ನ್ಯೂಯಾರ್ಕ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಇದು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ದೇಶಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ.

ಪ್ರೀತಿ ಸಿನ್ಹಾ ಅವರು, ಮಹಿಳೆಯರು, ಯುವಕರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ನಿರ್ದಿಷ್ಟ ಒತ್ತು ನೀಡಲಿದ್ದಾರೆ. ಸಣ್ಣ ಹಿಡುವಳಿದಾರ ರೈತರು ಮತ್ತು ಅವಕಾಶ ವಂಚಿತ ಸಮುದಾಯಗಳ ಏಳಿಗೆಗೆ ಪ್ರೋತ್ಸಾಹ ನೀಡಲಿದ್ದಾರೆ.

ಪ್ರೀತಿ ಅವರು ಹೂಡಿಕೆ ಮತ್ತು ಅಭಿವೃದ್ಧಿ ಹಣಕಾಸುಗಳಲ್ಲಿ ಮೂರು ದಶಕಗಳ ಜಾಗತಿಕ ಅನುಭವವನ್ನು ಹೊಂದಿದ್ದಾರೆ. ಜಿನೀವಾದ ವಿಶೇಷ ಅಭಿವೃದ್ಧಿ ಹಣಕಾಸು ಸಂಸ್ಥೆಯಾದ ಎಫ್‌ಎಫ್‌ಡಿ ಸಿಇಒ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಯುಎನ್‌ಸಿಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ. 

ಈ ಹಿಂದೆ, ಅವರು ನವದೆಹಲಿಯಲ್ಲಿ ಯೆಸ್ ಗ್ಲೋಬಲ್ ಇನ್‌ಸ್ಟಿಟ್ಯುಟ್‌ ಅನ್ನು ನಿರ್ವಹಿಸುತ್ತಿದ್ದರು. ಆಫ್ರಿಕನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಯುಎನ್‌ಸಿಡಿಎಫ್‌ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು