ಬ್ರಿಟನ್: ಸುಯೆಲ್ಲಾಗೆ ಮತ್ತೆ ಒಲಿದ ಗೃಹ ಖಾತೆ

ಲಂಡನ್ : ಬ್ರಿಟನ್ ವಲಸೆ ನೀತಿ ಸಂಬಂಧ ನಿರ್ಗಮಿತ ಪ್ರಧಾನಿ ಲಿಸ್ ಟ್ರಸ್ ಅವರ ನಿಲುವು ವಿರೋಧಿಸಿ ಗೃಹ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್‌ಮನ್ ಅವರನ್ನು ನೂತನ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದ್ದು, ಸುಯೆಲ್ಲಾ ಅವರನ್ನು ಗೃಹ ಕಾರ್ಯದರ್ಶಿಯಾಗಿ ಮುಂದುವರಿಸಿದ್ದಾರೆ.
ಸುಯೆಲ್ಲಾ ಅವರು ಸುನಕ್ ಅವರಂತೆಯೇ ಬ್ರೆಕ್ಸಿಟ್ ಅಭಿಯಾನದ ಪರವಿದ್ದರು. ಸುಯೆಲ್ಲಾ ಅವರ ರಾಜೀನಾಮೆ ಲಿಸ್ ಟ್ರಸ್ ಅವರ ಪದಚ್ಯುತಿಗೆ ವೇಗ ನೀಡಿತ್ತು.
ಸುನಕ್ ತಮ್ಮ ನಂಬಿಕಸ್ಥ ಜೇಮ್ಸ್ ಕ್ಲೆವರ್‌ಲಿ ಅವರನ್ನೂ ವಿದೇಶಾಂಗ ಕಾರ್ಯದರ್ಶಿಯಾಗಿ ಮತ್ತು ಬೆನ್ ವ್ಯಾಲೆಸ್ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ಮುಂದುವರಿಸಿದ್ದು, ನಧೀಮ್ ಜವಾರಿ ಅವರನ್ನು ಟೋರಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಗ್ರಾಂಟ್ ಶಾಪ್ಸ್ ಅವರಿಗೆ ವಾಣಿಜ್ಯ ಸಚಿವ ಸ್ಥಾನ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.