ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್ ಅವಧಿಗೆ ಭಾರತ ಅಧ್ಯಕ್ಷೀಯ ಸ್ಥಾನ ಅಲಂಕರಿಸಿದ್ದ ಸಂದರ್ಭದಲ್ಲಿ, ಅಫ್ಗಾನಿಸ್ತಾನ ಸೇರಿದಂತೆ ಜಾಗತಿಕ ವಿದ್ಯಮಾನಗಳಿಗೆ ಸಂಬಂಧಿಸಿ ಗಮನಾರ್ಹ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಯಿತು.
ಅಫ್ಗಾನಿಸ್ತಾನದ ನೆಲವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಹಾಗೂ ಇತರ ದೇಶಗಳನ್ನು ಬೆದರಿಸಲು ಬಳಸಿಕೊಳ್ಳಬಾರದು ಎಂಬಂಥ ಕಠಿಣ ನಿರ್ಣಯವನ್ನು ಭದ್ರತಾ ಮಂಡಳಿ ಅಂಗೀಕರಿಸಿತು. ಇದು ಜಾಗತಿಕ ಸುರಕ್ಷತೆ, ಉಗ್ರವಾದಕ್ಕೆ ಸಂಬಂಧಿಸಿ ತನ್ನ ನಿಲುವನ್ನು ಸ್ಪಷ್ಟಪಡಿಸುವಲ್ಲಿ ಭಾರತ ಯಶಸ್ವಿಯಾಗಿರುವುದನ್ನು ಬಿಂಬಿಸುತ್ತದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
‘ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನದಿಂದ ಭಾರತ ನಿರ್ಗಮಿಸುತ್ತಿದೆ. ಅಧ್ಯಕ್ಷೀಯ ಸ್ಥಾನದಲ್ಲಿರುವ ಅವಧಿಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲು ಬೆಂಬಲಿಸಿದ ಎಲ್ಲ ಸದಸ್ಯ ರಾಷ್ಟ್ರಗಳಿಗೆ ಅಭಿನಂದಿಸುವೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿ ಟ್ವೀಟ್ ಮಾಡಿದ್ದಾರೆ.
‘ಸೆಪ್ಟೆಂಬರ್ ಅವಧಿಗೆ ಅಧ್ಯಕ್ಷೀಯ ಸ್ಥಾನ ವಹಿಸಿಕೊಳ್ಳುತ್ತಿರುವ ಐರ್ಲೆಂಡ್‌ನ ರಾಯಭಾರಿ ಗೆರಾಲ್ಡಿನ್ ನಾಸನ್ ಅವರಿಗೆ ಶುಭ ಕೋರುವೆ’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.