ಶನಿವಾರ, ಮೇ 28, 2022
30 °C
ಜೈಲಿಗೆ ಟಿಕ್‌ಟಾಕ್ ಸ್ಟಾರ್

ಬಾಲಿಯ ಪವಿತ್ರ ಮರದ ಮುಂದೆ ನಗ್ನ ಫೋಟೊಕ್ಕೆ ಪೋಸ್ ಕೊಟ್ಟ ರಷಿಯನ್ ಬಾಲೆ!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇತ್ತೀಚೆಗೆ ಇನ್‌ಸ್ಟಾಗ್ರಾಂ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಶಾರ್ಟ್‌ ವಿಡಿಯೊಗಳನ್ನು ಮಾಡುತ್ತಾ ಅನೇಕ ಯುವಕ ಯುವತಿಯರು ಕೆಲ ಸಲ ಅತಿರೇಕದಿಂದ ವರ್ತಿಸಿ ಸುದ್ದಿಯಾಗುತ್ತಿದ್ದಾರೆ.

ಇದೇ ರೀತಿ ಟಿಕ್‌ಟಾಕ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊಗಳನ್ನು ಮಾಡುತ್ತಾ ಹೆಸರು ಗಳಿಸಿದ್ದ ರಷ್ಯಾದ ಯುವತಿಯೊಬ್ಬಳು ಹೋದಲ್ಲಿ ಬಂದಲ್ಲಿ ಹೇಗೆ ಇರಬೇಕು ಎಂಬ ಜ್ಞಾನವಿಲ್ಲದೇ ಈಗ ತೊಂದರೆಗೆ ಸಿಲುಕಿಕೊಂಡಿದ್ದಾಳೆ.

ತನ್ನ ಗೆಳೆಯನೊಡನೆ ಇಂಡೋನೇಷಿಯಾದ ಬಾಲಿಗೆ ಬೇಟಿ ನೀಡಿದ್ದ ಯುವತಿ ಅಲಿನಾ ಫಾಜ್‌ಲೀವಾ ಬಾಲಿ ಪಕ್ಕದಲ್ಲಿರುವ ತಬನಾಮ್ ಬಳಿ ಇರುವ ಹಾಗೂ 600ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಬಾಬಕಾನ್ ಮಂದಿರದ ಪವಿತ್ರ ಮರವೊಂದಕ್ಕೆ ತೆರಳಿ ಅಲ್ಲಿ ಬೆತ್ತಲೆಯಾಗಿ ಫೋಟೊಗಳನ್ನು ತೆಗೆದುಕೊಂಡಿದ್ದಳು. ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲೂ ಕೂಡ ಹಂಚಿಕೊಂಡಿದ್ದಳು.

ಫೋಟೊಗಳು ವೈರಲ್ ಆದ ನಂತರ ತಬನಾಮ್ ಜನತೆ ಕೆಂಡಾಮಂಡಲವಾಗಿ ತಮ್ಮ ದೇಶದ ಪವಿತ್ರಮರದ ಮುಂದೆ ಅಸಭ್ಯ ವರ್ತನೆ ತೋರಿದ ಯುವತಿಯನ್ನು ಬಂಧಿಸುವಂತೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ.

ಯುವತಿ ಅಲಿನಾ ಫಾಜ್‌ಲೀವಾ ಅವರಿಗೆ ಬಾಲಿ ಸ್ಥಳೀಯ ಕೋರ್ಟ್ 6 ವರ್ಷ ಸೆರೆವಾಸ ಹಾಗೂ ₹78,000 ದಂಡ ವಿಧಿಸಿದ್ದಾರೆ. ಮಾಡಿದ ತಪ್ಪಿಗೆ ಜೈಲು ಸೇರಿರುವ ಅಲಿನಾ, ತನ್ನದು ದೊಡ್ಡ ತಪ್ಪಾಗಿದೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಬಾಲಿ ಪೊಲೀಸರೆದುರು ಗೋಗರೆದಿದ್ದಾಳೆ.

ಅಂದಹಾಗೇ ಅಲಿನಾ ಫಾಜ್‌ಲೀವಾ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ 16 ಸಾವಿರಕ್ಕೂ ಹೆಚ್ಚು ಹಿಂಬಾಲಿಕರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು