ಇರಾನ್ ವಸ್ತ್ರಸಂಹಿತೆ ವಿರೋಧಿ ಹೋರಾಟ: ಮತ್ತೊಬ್ಬ ವ್ಯಕ್ತಿಗೆ ನೇಣು

ದುಬೈ(ಎಪಿ): ದೇಶದಾದ್ಯಂತ ನಡೆಯುತ್ತಿರುವ ವಸ್ತ್ರಸಂಹಿತೆ ವಿರೋಧಿ ಹೋರಾಟದ ವೇಳೆ ಅಪರಾಧ ಕೃತ್ಯ ಎಸಗಿದ್ದ ಮತ್ತೊಬ್ಬ ಕೈದಿಯನ್ನು ಇರಾನ್ ಸೋಮವಾರ ಸಾರ್ವಜನಿಕವಾಗಿ ಗಲ್ಲಿಗೇರಿಸಿತು.
ಮಜಿದ್ರೆಝಾ ರಹ್‌ನವಾರ್ಡ್ ಶಿಕ್ಷೆಗೊಳಪಟ್ಟ ಕೈದಿ. ಪ್ರತಿಭಟನಕಾರರನ್ನು ಭದ್ರತಾ ಪಡೆ ಹತ್ಯೆ ಮಾಡಿದ್ದನ್ನು ಖಂಡಿಸಿ ಅರೆಸೇನಾ ಪಡೆಯ ಇಬ್ಬರಿಗೆ ಚೂರಿಯಿಂದ ಇರಿದ ಎಂಬ ಆರೋಪ ಮಜಿದ್ರೆಝಾ ವಿರುದ್ಧ ಕೇಳಿ ಬಂದಿತ್ತು. ಪ್ರಕರಣ ಸಂಬಂಧ ಬಂಧಿಸಿದ ತಿಂಗಳ ಅಂತರದಲ್ಲಿ ಇರಾನ್ ಸರ್ಕಾರ ಗಲ್ಲು ಶಿಕ್ಷೆ ವಿಧಿಸಿದೆ. ಕಟ್ಟಡ ನಿರ್ಮಾಣಕ್ಕೆ ಬಳಸುವ ಕ್ರೇನ್‌ಗೆ ನೇತು ಹಾಕಿ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಮೂಲಕ ಇತರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಮಾನವ ಹಕ್ಕುಗಳ ಹೋರಾಟಗಾರರ ಪ್ರಕಾರ, ಇರಾನ್ ಸರ್ಕಾರ ಈಗಾಗಲೇ ಕನಿಷ್ಠ 12 ಮಂದಿಯನ್ನು ಮರಣದಂಡನೆಗೆ ಗುರಿಪಡಿಸಿದೆ. ಪ್ರತಿಭಟನೆಯಲ್ಲಿ ಭಾಗಿಯಾದ ಕನಿಷ್ಠ 488 ಜನರನ್ನು ಇರಾನ್ ಸರ್ಕಾರ ಹತ್ಯೆ ಮಾಡಿದೆ ಮತ್ತು 18,200 ಜನರನ್ನು ಬಂಧಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.