ಅಮಿನಿ ಪ್ರತಿಭಟನೆ: ಇರಾನ್‌ನ ಇನ್ನೂ ಮೂವರಿಗೆ ಮರಣದಂಡನೆ

ಟೆಹರಾನ್: ಇರಾನ್‌ನಲ್ಲಿ ಮಹ್ಸಾ ಅಮಿನಿ ಸಾವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯನ್ನು ಕೊಂದ ಆರೋಪದ ಮೇಲೆ ಇರಾನ್‌ನ ಇನ್ನೂ ಮೂವರಿಗೆ ಸೋಮವಾರ ಮರಣದಂಡನೆ ಘೋಷಿಸಲಾಗಿದೆ.
ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಇದುವರೆಗೆ 17 ಜನರನ್ನು ಮರಣದಂಡನೆಗೆ ಗುರಿಮಾಡಲಾಗಿದೆ. ಈ ಪೈಕಿ ನಾಲ್ವರಿಗೆ ಶಿಕ್ಷೆ ಜಾರಿಯಾಗಿದೆ.
ಈಗ ಘೋಷಿಸಲಾಗಿರುವ ಎಲ್ಲಾ ಶಿಕ್ಷೆಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಆನ್‌ಲೈನ್ ಸುದ್ದಿಸಂಸ್ಥೆ ಮಿಜಾನ್ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.