ಶುಕ್ರವಾರ, ಜನವರಿ 27, 2023
17 °C

‘ದಿ ಟರ್ಮಿನಲ್’ ಸಿನಿಮಾಕ್ಕೆ ಸ್ಪೂರ್ತಿಯಾಗಿದ್ದ ಇರಾನ್ ನಿರಾಶ್ರಿತ ನಾಸ್ಸರಿ ಸಾವು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಪ್ಯಾರಿಸ್: ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರ ‘ದಿ ಟರ್ಮಿನಲ್’ ಸಿನಿಮಾಕ್ಕೆ ಸ್ಪೂರ್ತಿಯಾಗಿದ್ದ ಇರಾನ್ ಮೂಲದ ನಿರಾಶ್ರಿತ ಮೆಹರಾನ್‌ ಕರಿಮಿ ನಾಸ್ಸರಿ (77) ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ನಿಧನರಾಗಿದ್ದಾರೆ.

18 ವರ್ಷ ಪ್ಯಾರಿಸ್‌ನ ಚಾರ್ಲ್ಸ್‌ ಡಿ ಗುಲ್ಲೆ ವಿಮಾನ ನಿಲ್ದಾಣದಲ್ಲೇ ವಾಸವಾಗಿದ್ದ ನಾಸ್ಸರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ನಾಸ್ಸರಿ 1945 ರಲ್ಲಿ  ಇರಾನ್‌ನ ಸೋಲೆಮನ್‌ನಲ್ಲಿ ಜನಿಸಿದ್ದರು. ತಂದೆ ಇರಾನ್ ಮೂಲದವರು. ತಾಯಿ ಬ್ರಿಟಿಷ್. 1974 ರಲ್ಲಿ ಇಂಗ್ಲೆಂಡ್‌ಗೆ ತೆರಳಿ ವಿದ್ಯಾಭ್ಯಾಸ ಮುಗಿಸಿ ವಾಪಸ್ ಇರಾನ್‌ಗೆ ಬಂದಾಗ ನಾಸ್ಸರಿಗೆ ಆಘಾತ ಕಾದಿತ್ತು.

ನಾಸ್ಸರಿ ಇರಾನ್ ಅಧ್ಯಕ್ಷರ ವಿರುದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಅವರನ್ನು ಇರಾನ್‌ನಿಂದ ಗರಿಪಾರು ಮಾಡಲಾಯಿತು. ಈ ವೇಳೆ ಅವರು ತಮ್ಮ ದಾಖಲಾತಿಗಳನ್ನು ಕಳೆದುಕೊಂಡಿದ್ದರು. ತಾಯಿಯನ್ನು ಹುಡುಕುತ್ತಾ ಹೋದ ಅವರಿಗೆ ಇಂಗ್ಲೆಂಡ್, ಬೆಲ್ಜಿಯಂ, ಜರ್ಮನಿ, ನೆದರ್ಲೆಂಡ್ ಸೇರಿದಂತೆ ಯಾವುದೇ ದೇಶಗಳು ಆಶ್ರಯ ನೀಡಲಿಲ್ಲ. ಕಡೆಗೆ ಅವರ ತಾಯಿಯೂ ಸಿಗಲಿಲ್ಲ.

ಇದರಿಂದ ಬೇಸತ್ತ ನಾಸ್ಸರಿ ಪ್ರಾನ್ಸ್‌ನ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌ 2ನಲ್ಲೇ 19978 ರಿಂದ 2006ವರೆಗೆ 18 ವರ್ಷ ತಂಗಿದ್ದರು. ಅಲ್ಲಿಯ ಒಂದು ಮೂಲೆಯಲ್ಲಿ ತಂಗಿ ವಿಮಾನ ನಿಲ್ದಾಣದ ಕೆಲಸ ಮಾಡುತ್ತಾ, ಪ್ರಯಾಣಿಕರ ಜೊತೆ ಸ್ನೇಹ ಬೆಳೆಸುತ್ತಾ ಕಾಲ ಕಳೆಯುತ್ತಿದ್ದರು. ಅಲ್ಲದೇ ಪ್ರತಿದಿನ ಡೈರಿಯನ್ನು ಬರೆಯುತ್ತಿದ್ದರು. ಇದರಿಂದ ನಾಸ್ಸರಿ ಚಾರ್ಲ್ಸ್‌ ಡಿ ಗುಲ್ಲೆಯಂತ ವಿಖ್ಯಾತ ವಿಮಾನ ನಿಲ್ದಾಣದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದರು. 2006 ರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಇತ್ತೀಚೆಗೆ ಅವರು ಮತ್ತೆ ವಿಮಾನ ನಿಲ್ದಾಣದಲ್ಲೇ ಬಂದು ತಂಗಿದ್ದರು.

ನಾಸ್ಸರಿ ಶನಿವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರನ್ನು ಉಳಿಸುವ ನಮ್ಮ ಪ್ರಯತ್ನ ಸಫಲವಾಗಲಿಲ್ಲ ಎಂದು ಭದ್ರತಾ ಅಧಿಕಾರಿಗಳು ಕಂಬನಿ ಮಿಡಿದಿದ್ದಾರೆ.

2004 ರಲ್ಲಿ ಸ್ಟಿವನ್ ಸ್ಟಿಲ್‌ಬರ್ಗ್‌ ಅವರ ‘ದಿ ಟರ್ಮಿನಲ್’ ಬಿಡುಗಡೆಯಾಗಿತ್ತು. ಮುಖ್ಯಪಾತ್ರದಲ್ಲಿ ಹಾಲಿವುಡ್‌ ನಟ ಟಾಮ್ ಹಾಂಕ್ಸ್‌ ನಟಿಸಿದ್ದರು.

‘ದಿ ಟರ್ಮಿನಲ್’ ಚಿತ್ರದ ಟ್ರೇಲರ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು