ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾದಲ್ಲಿ 24 ಗಂಟೆ ಮುಂದುವರಿದ ಐಸಿಸ್‌ ದಾಳಿ: ಇರಾಕ್‌ನಲ್ಲಿ ಕಟ್ಟೆಚ್ಚರ 

Last Updated 22 ಜನವರಿ 2022, 12:42 IST
ಅಕ್ಷರ ಗಾತ್ರ

ಬಾಗ್ದಾದ್‌: ಸಿರಿಯಾದ ಕಾರಾಗೃಹದ ಮೇಲೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ನಡೆಸಿದ ಭಯೋತ್ಪಾದಕ ದಾಳಿ 24 ಗಂಟೆ ಮುಂದುವರಿದಿದ್ದು, ಕಾಳಗದಲ್ಲಿ 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಮುಖ್ಯ ಕಾರಾಗೃಹದ ಮೇಲೆ 100ಕ್ಕೂ ಹೆಚ್ಚು ಐಸಿಸ್‌ ಭಯೋತ್ಪಾದಕರು ದಾಳಿ ನಡೆಸಿದರು. ಅಲ್ಲಿದ್ದ ಅಮೆರಿಕ ಬೆಂಬಲಿತ ಕುರ್ದಿಶ್‌ ಹೋರಾಟಗಾರರು ಸಹ ಪ್ರತಿದಾಳಿ ನಡೆಸಿದರು. ಸಿರಿಯಾದಲ್ಲಿನ ಈಶಾನ್ಯ ನಗರದ ಹಸ್ಸಾಕೆಹ್‌ನಲ್ಲಿರುವ ಗ್ವೈರಾನ್‌ ಜೈಲನ್ನು ಗರಿಯಾಗಿಸಿ ದಾಳಿ ನಡೆಸಲಾಗಿದೆ. ಅಮೆರಿಕ ಬೆಂಬಲಿತ ಸಿರಿಯನ್‌ ಕುರ್ದಿಶ್‌ ಪಡೆಗಳು ಶಂಕಿತ ಸುಮಾರು 5 ಸಾವಿರ ಐಎಸ್‌ ಭಯೋತ್ಪಾದಕರನ್ನು ಬಂಧಿಸಿ ಈ ಜೈಲಿನಲ್ಲಿ ಇರಿಸಿದ್ದರು. ಇದರಲ್ಲಿ ಸಂಘಟನೆಯ ಕಮಾಂಡರ್‌ಗಳು ಮತ್ತು ಅಪಾಯಕಾರಿ ಎನ್ನಲಾದ ಭಯೋತ್ಪಾದಕರಿದ್ದರು ಎಂದುಸಿರಿಯನ್ ಡೆಮಾಕ್ರಟಿಕ್ ಫೋರ್ಸ್‌ ಕುರ್ದಿಶ್‌ ಪಡೆಯ ವಕ್ತಾರ ಫರ್ಹಾದ್‌ ಶಮಿ ಹೇಳಿದರು.

ಭಯೋತ್ಪಾದಕ ಬಂದೂಕುಧಾರಿಗಳು ಶುಕ್ರವಾರ ಇರಾಕ್‌ನ ಗಡಿಯತ್ತ ನುಗ್ಗಿದ್ದರು. ಉತ್ತರ ಬಾಗ್ದಾದ್‌ನ ಸೇನಾ ಶಿಬಿರದಲ್ಲಿ ಸೈನಿಕರ ಮೇಲೆ ಅವರು ದಾಳಿ ನಡೆಸಿದ್ದರಿಂದ 11 ಸೈನಿಕರು ಹುತಾತ್ಮರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇರಾಕ್‌ನಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT