ಶುಕ್ರವಾರ, ಫೆಬ್ರವರಿ 26, 2021
31 °C

ಅಮೆರಿಕ: ಖಜಾನೆ ಕಾರ್ಯದರ್ಶಿಯಾಗಿ ಅರ್ಥಶಾಸ್ತ್ರಜ್ಞೆ ಜಾನೆಟ್‌ ಎಲೆನ್‌ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಖಜಾನೆ ಇಲಾಖೆಯ ಮೊದಲ ಮಹಿಳಾ ಕಾರ್ಯದರ್ಶಿಯಾಗಿ ಹೆಸರಾಂತ ಅರ್ಥಶಾಸ್ತ್ರಜ್ಞೆ ಜಾನೆಟ್‌ ಎಲೆನ್‌ ಅವರ ನೇಮಕವನ್ನು ಸೆನೆಟ್‌ ಮಂಗಳವಾರ ಅನುಮೋದಿಸಿದೆ.

ಫೆಡರಲ್‌ ರಿಸರ್ವ್‌ನ ಮಾಜಿ ಅಧ್ಯಕ್ಷೆಯಾದ ಎಲೆನ್‌ ಅವರ ನೇಮಕವನ್ನು ಸೆನೆಟ್ 84–15 ಮತಗಳಿಂದ ಬೆಂಬಲಿಸಿತು. ಉಭಯಪಕ್ಷೀಯ ಮತಗಳನ್ನು ಪಡೆಯುವ ಮೂಲಕ ಬೈಡನ್‌ ಕ್ಯಾಬಿಟನ್‌ನ ಮೂರನೇ ಸದಸ್ಯರಾದರು.

ಅಮೆರಿಕದ ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷೆಯಾಗಿ ಜಾನೆಟ್‌ ಎಲೆನ್‌ ಅವರು 2014 ರಿಂದ 2018ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸರಿಪಡಿಸಲು ಜೋ ಬೈಡನ್‌ ಆಡಳಿತಕ್ಕೆ ಅಗತ್ಯ ಸಲಹೆ ನೀಡುವ ಹೊಣೆಗಾರಿಕೆ ಇವರ ಮೇಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು