ಬುಧವಾರ, ಮೇ 25, 2022
24 °C

ಬ್ರಿಟನ್‌, ಬ್ರೆಜಿಲ್‌, ಆಫ್ರಿಕಾ ನಂತರ ಈಗ ಜಪಾನ್‌ನಲ್ಲಿ ಹೊಸ ಕೊರೊನಾ ವೈರಸ್‌

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಟೊಕಿಯೊ: ಬ್ರಿಟನ್‌, ಬ್ರೆಜಿಲ್‌, ಆಫ್ರಿಕಾ ನಂತರ ಈಗ ಜಪಾನ್‌ನಲ್ಲಿಯೂ ಹೊಸ ಮಾದರಿಯ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದೆ. ಸಾಂಕ್ರಾಮಿಕ ಕಾಯಿಲೆಯ ಮೂರನೇ ಅಲೆಯನ್ನು ನಿಗ್ರಹಿಸಲು ದೇಶ ಪ್ರಯತ್ನಿಸುತ್ತಿರುವಾಗಲೇ ಪತ್ತೆಯಾಗಿರುವ ಈ ಹೊಸ ಬಗೆಯ ವೈರಸ್‌ ಸದ್ಯ ಆತಂಕ ಮೂಡಿಸಿದೆ.

ಪೂರ್ವ ಜಪಾನ್‌ನ ಕಾಂಟೊ ಎಂಬಲ್ಲಿ ಪತ್ತೆಯಾದ 91 ಪ್ರಕರಣಗಳಲ್ಲಿ ಮತ್ತು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ 2 ಪ್ರಕರಣಗಳಲ್ಲಿ ರೂಪಾಂತರಿ ಕೊರೊನಾ ವೈರಸ್‌ ಕಾಣಿಸಿಕೊಂಡಿದೆ ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೊ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಸದ್ಯ ಜಪಾನ್‌ನಲ್ಲಿ ವಿತರಿಸಲಾಗುತ್ತಿರುವ ಲಸಿಕೆಗಳಿಗೆ ಈ ರೂಪಾಂತರಿ ಕೊರೊನಾ ವೈರಸ್‌ ಪ್ರತಿರೋಧ ಹೊಂದಿರಬಹುದು ಎಂಬ ಕಾರಣಕ್ಕೆ ಸರ್ಕಾರವು ಕಟ್ಟೆಚ್ಚರದ ಸಂದೇಶ ರವಾನಿಸಿದೆ.

'ಇದು ಈಗಿರುವ ಕೊರೊನಾ ವೈರಸ್‌ನ ತಳಿಗಳಿಗಿಂತಲೂ ಹೆಚ್ಚು ಸಾಂಕ್ರಾಮಿಕವಾಗಬಹುದು. ಹಾಗೇನಾದರೂ ಸಾಂಕ್ರಾಮಿಕವಾದರೆ ಪ್ರಕರಣಗಳ ಶೀಘ್ರ ಏರಿಕೆಗೆ ಕಾರಣವಾಗಬಹುದು' ಎಂದು ಕ್ಯಾಟೊ ಹೇಳಿದರು.

ಜಪಾನ್‌ನಲ್ಲಿ ಬ್ರಿಟನ್, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಮಾದರಿಯ 151 ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ 4,00,000 ಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳಿದ್ದು 7,194 ಸಾವು ಸಂಭವಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು