ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್‌ಗೆ ಇನ್ನು 3 ತಿಂಗಳು: ಕೋವಿಡ್‌ ತಡೆಗೆ ಜಪಾನ್‌ ಕಠಿಣ ಕ್ರಮ

ಒಲಿಂಪಿಕ್ಸ್‌ಗೆ ಮೂರು ತಿಂಗಳು ಬಾಕಿ
Last Updated 9 ಏಪ್ರಿಲ್ 2021, 7:15 IST
ಅಕ್ಷರ ಗಾತ್ರ

ಟೋಕಿಯೊ: ಒಲಿಂಪಿಕ್ಸ್‌ಗೆ ಮೂರು ತಿಂಗಳು ಬಾಕಿ ಉಳಿದಿರುವುದರಿಂದ, ಕೋವಿಡ್‌–19 ಪ್ರಸರಣ ತಡೆಗೆ ಜಪಾನ್‌ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಪಶ್ಚಿಮ ಜಪಾನಿನ ಕ್ಯೂಟೊ, ಟೋಕಿಯೊ ,ದಕ್ಷಿಣ ದ್ವೀಪ ಪ್ರಾಂತ್ರ್ಯದ ಒಕಿನಾವದಲ್ಲಿ ಕೋವಿಡ್‌ ಪ್ರಸರಣ ತಡೆಯುವ ಸಂಬಂಧ ತುರ್ತು ಕ್ರಮಗಳನ್ನು ಕೈಗೊಳ್ಳಲು ತಜ್ಞರ ಸಮಿತಿ ಅನುಮೋದನೆ ನೀಡಿದೆ.

ಪ್ರಧಾನಿ ಯೋಶಿಹಿಡೆ ಸುಗಾ ಅವರು ಶುಕ್ರವಾರ ಈ ಕ್ರಮಗಳ ಬಗ್ಗೆ ಆದೇಶ ಹೊರಡಿಸುವ ಸಾಧ್ಯತೆಯಿದೆ. ಈ ಕ್ರಮಗಳು ಸೋಮವಾರ ಜಾರಿಗೆ ಬರಲಿದ್ದು, ಮೇ ತಿಂಗಳ ತನಕ ಜಾರಿಯಲ್ಲಿ ಇರಲಿವೆ.

‘ಈ ಕಠಿಣ ಕ್ರಮಗಳು ದೇಶದಲ್ಲಿ ಮತ್ತೊಂದು ತುರ್ತು ‍ಪರಿಸ್ಥಿತಿಯನ್ನು ತಡೆಯುವ ಗುರಿಯನ್ನು ಹೊಂದಿವೆ’ ಎಂದು ಸುಗಾ ತಿಳಿಸಿದರು.

‘ಕೊರೊನಾ ವೈರಸ್‌ನ ರೂಪಾಂತರಿತ ಹೊಸ ತಳಿಯಿಂದಾಗಿ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ವ್ಯಕ್ತಿಗತ ಅಂತರ ಕಾಪಾಡುವುದು, ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರ ಬರುವಂತೆ ಜನರಿಗೆ ಗುರುವಾರ ಸೂಚಿಸಲಾಗಿದೆ. ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 8 ಗಂಟೆಗೆ ಮುಚ್ಚುವಂತೆ ಸೂಚನೆ ನೀಡುವ ಸಾಧ್ಯತೆಗಳು ಇವೆ’ ಎಂದು ಟೋಕಿಯೊ ಗವರ್ನರ್‌ ಯುರಿಕೊ ಕೊಯಿಕೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT