ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಮೂಲ ಪತ್ತೆಗೆ ಹೆಚ್ಚಿನ ತನಿಖೆ ಅಗತ್ಯ: ಜಪಾನ್‌

Last Updated 31 ಮಾರ್ಚ್ 2021, 10:13 IST
ಅಕ್ಷರ ಗಾತ್ರ

ಟೋಕಿಯೊ: ‘ಕೋವಿಡ್‌–19 ಮೂಲದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನೀಡಿದ ವರದಿ ಸಮರ್ಪಕವಾಗಿಲ್ಲ. ಮೂಲವನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಸಬೇಕು’ ಎಂದು ಜಪಾನ್‌ ಹೇಳಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಮಂಗಳವಾರ ಕೋವಿಡ್‌–19 ಮೂಲದ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿತ್ತು. ಈ ವರದಿಯಲ್ಲಿ ‘ಕೊರೊನಾ ವೈರಸ್ ಪ್ರಯೋಗಾಲಯದಿಂದ ಸೋರಿಕೆ ಆಗಿರುವ ಸಾಧ್ಯತೆ ತೀರಾ ಕಡಿಮೆ. ಬಾವಲಿಯಿಂದ ಮತ್ತೊಂದು ಪ್ರಾಣಿಗೆ ಹಾಗೂ ಪ್ರಾಣಿ ಮೂಲಕ ಮಾನವನಿಗೆ ಕೋವಿಡ್‌–19 ಹರಡಿರುವ ಸಾಧ್ಯತೆಯೇ ಹೆಚ್ಚು’ ಎಂದು ಹೇಳಿತ್ತು.

ಇದನ್ನು ಖಂಡಿಸಿರುವ ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೊ‌,‘ ಭವಿಷ್ಯದಲ್ಲಿ ಈ ರೀತಿಯ ಸಾಂಕ್ರಾಮಿಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಕಣ್ಗಾವಲು ಮುಕ್ತ, ಸ್ವತಂತ್ರ ಮತ್ತು ತಜ್ಞರ ನೇತೃತ್ವದ ತನಿಖೆಯ ಅವಶ್ಯಕತೆ ಇದೆ.ಡಬ್ಲ್ಯುಎಚ್‌ಒನ ಈ ತನಿಖೆಯಲ್ಲಿ ವಿಳಂಬವಾಗಿದೆ. ಅಲ್ಲದೆ ತನಿಖೆಯಲ್ಲಿ ವೈರಸ್‌ನ ಮಾದರಿಯ ಕೊರತೆಯೂ ಉಂಟಾಗಿದೆ ’ಎಂದು ಹೇಳಿದರು.

‘ನಾವು ವಿಶ್ವ ಆರೋಗ್ಯ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಈ ವಿಷಯವನ್ನು ರಾಜಕೀಯವಾಗಿ ಬಳಸಿದರೆ, ಹಲವರು ಜೀವಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಚೀನಾ ಎಚ್ಚರಿಕೆ ನೀಡಿದೆ.

ಅಮೆರಿಕ ಸೇರಿದಂತೆ ಇತರ ದೇಶಗಳು ಕೂಡ ಡಬ್ಲ್ಯುಎಚ್‌ಒ ವರದಿಯಲ್ಲಿ ನಿರ್ಣಾಯಕ ಮಾಹಿತಿ ಮತ್ತು ಪಾರದರ್ಶಕತೆಯ ಕೊರತೆಯಿದೆ ಎಂದು ದೂರಿದೆ.

‘ಚೀನಾದಲ್ಲಿ ಕೋವಿಡ್‌–19 ಮೂಲದ ಪತ್ತೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕು. ಈ ಬಗ್ಗೆ ಅಧ್ಯಯನ ನಡೆಸಲು ಬೇರೆ ದೇಶಗಳಿಗೆ ಸಹಕಾರ ನೀಡಲು ಕೂಡ ಜಪಾನ್‌ ಸಿದ್ಧವಿದೆ’ ಎಂದು ಕ್ಯಾಟೊ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT