ಸೋಮವಾರ, ಜುಲೈ 4, 2022
24 °C

ಕೋವಿಡ್-19 ರೋಗಕ್ಕೆ ಬಲಿಯಾದವರಿಗೆ ನಮನ ಸಲ್ಲಿಸಿದ ಜೋ ಬೈಡನ್

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ನೂತನ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನಾ ದಿನದಂದು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್, ಲಿಂಕನ್ ಸ್ಮಾರಕದಲ್ಲಿ ಕೊರೊನಾ ವೈರಸ್ ಪಿಡುಗಿನಿಂದಾಗಿ ಮಡಿದವರಿಗಾಗಿ ನಮನ ಸಲ್ಲಿಸಿದ್ದಾರೆ.

ಅಮೆರಿಕದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಬಲಿಯಾದವರ ಸಂಖ್ಯೆ ನಾಲ್ಕು ಲಕ್ಷ ದಾಟಿದೆ.

'ಗುಣಮುಖರಾಗಲು ನಾವಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೆಲವೊಮ್ಮೆ ಇಂತಹ ಸಂದರ್ಭವನ್ನು ನೆನಪಿಸುವುದು ಕಷ್ಟಕರ. ಆದರೂ ನಾವಿದರಿಂದ ಗುಣಮುಖರಾಗಲಿದ್ದೇವೆ' ಎಂದು ಲಿಂಕನ್ ಸ್ಮಾರಕದ ಮುಂದೆ ಕೋವಿಡ್-19ನಿಂದಾಗಿ ಮಡಿದವರಿಗೆ ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಜೋ ಬೈಡನ್ ತಿಳಿಸಿದರು.

ಇದನ್ನೂ ಓದಿ: 

ನಾವೊಂದು ರಾಷ್ಟ್ರವಾಗಿ ಇದನ್ನು ಮಾಡುವುದು ಮುಖ್ಯವೆನಿಸಿದೆ. ಅದಕ್ಕಾಗಿಯೇ ನಾವು ಇಂದು ಇಲ್ಲಿದ್ದೇವೆ. ಸೂರ್ಯೋದಯ ಮತ್ತು ಮುಸ್ಸಂಜೆಯ ನಡುವೆ ಕತ್ತಲೆಯನ್ನು ಹೋಗಲಾಡಿಸಲು ದೀಪವನ್ನು ಬೆಳಗಿಸೋಣ ಮತ್ತು ಈ ಕ್ಷಣದಲ್ಲಿ ಬಲಿಯಾದವರನ್ನು ನೆನಪಿಸಿಕೊಳ್ಳೋಣ ಎಂದು ತಿಳಿಸಿದರು.

ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಬುಧವಾರ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷೆಯಾಗಿ ಪದಗ್ರಹಣ ಮಾಡಲಿರುವ ಕಮಲಾ ಹ್ಯಾರಿಸ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು