ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟಿನ್ ಕೆಲವು ಸಲಹೆಗಾರರನ್ನು ಗೃಹ ಬಂಧನದಲ್ಲಿ ಇರಿಸಿರಬಹುದು: ಜೋ ಬೈಡನ್

Last Updated 1 ಏಪ್ರಿಲ್ 2022, 6:17 IST
ಅಕ್ಷರ ಗಾತ್ರ

ವಾಷಿಂಗ್ಟನ್:ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ತಮ್ಮ ಕೆಲವು ಸಲಹೆಗಾರರನ್ನು ಗೃಹ ಬಂಧನಕ್ಕೆ ಒಳಪಡಿಸಿರುವಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ನಲ್ಲಿನ ಸವಾಲುಗಳ ಬಗ್ಗೆ ಪುಟಿನ್‌ಗೆ ತಮ್ಮ ಸಿಬ್ಬಂದಿಯಿಂದ ಸರಿಯಾದ ಮಾಹಿತಿ ಲಭ್ಯವಾಗುತ್ತಿಲ್ಲ ಎಂದು ಬ್ರಿಟನ್ ಮತ್ತು ಯುಎಸ್‌ ಗುಪ್ತಚರ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಬೈಡನ್‌,ಪುಟಿನ್ ತಾವೇ ಪ್ರತ್ಯೇಕವಾಸದಲ್ಲಿ ಉಳಿದಿರಬಹುದು. ಇಲ್ಲವೇ ತಮ್ಮ ಸಲಹೆಗಾರರಲ್ಲಿ ಕೆಲವರನ್ನು ವಜಾ ಮಾಡಿರಬಹುದು ಅಥವಾ ಅವರನ್ನು ಗೃಹ ಬಂಧನದಲ್ಲಿ ಇರಿಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ರಷ್ಯಾ ಸೇನೆಯು ಫೆಬ್ರುವರಿ 24ರಂದು ಉಕ್ರೇನ್‌ ಮೇಲಿನ ಆಕ್ರಮಣ ಆರಂಭಿಸಿತ್ತು. ರಷ್ಯಾ ಅಧ್ಯಕ್ಷ ಪುಟಿನ್ ಅವರು ಇದನ್ನು 'ವಿಶೇಷ ಮಿಲಿಟರಿ ಕಾರ್ಯಾಚರಣೆ' ಎಂದು ಕರೆದರೆ, ಪುಟಿನ್‌ ಅಪ್ರಚೋದಿತ ಆಕ್ರಮಣ ಆರಂಭಿಸಿದ್ದಾರೆ ಎಂದು ಉಕ್ರೇನ್ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT