ಫಯೇತ್ತೆವಿಲ್ಲೆ(ಅಮೆರಿಕ): ’ಟ್ರಂಪ್ ಆಡಳಿತ ಕೊರೊನಾ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಸೋತಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಮೊದಲ ದಿನವೇ ’ಕೋವಿಡ್ 19’ ಪ್ರಕರಣಗಳನ್ನು ಸಮರ್ಪಕವಾಗಿ ನಿಯಂತ್ರಿಸುವಂತಹ ಕ್ರಿಯಾ ಯೋಜನೆ ಸಿದ್ಧಪಡಿಸುವುದಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡೆನ್ ಭರವಸೆ ನೀಡಿದರು.

ಬೈಡೆನ್ ಭಾನುವಾರ ಫಿಲಿಡೆಲ್ಫಿಯಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ’ಟ್ರಂಪ್ ಆಡಳಿತ ಕೊರೊನಾ ಪ್ರಕರಣಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ’ ಎಂದು ಟೀಕಿಸಿದರು. ’ಮುಖಗವಸನ್ನು ಧರಿಸುವ ಬದಲು, ಅದನ್ನು ಅಣಕಿಸುವಂತಹ ಅಧ್ಯಕ್ಷರಿರುವ ಈ ದೇಶದಲ್ಲಿ, ನಾವು ಯಾವ ಸ್ಥಿತಿಯಲ್ಲಿದ್ದೇವೆಂದು ಯೋಚಿಸಿ ನೋಡಿ’ ಎಂದು ಅವರು ಹೇಳಿದರು.

’ಡೊನಾಲ್ಡ್ ಟ್ರಂಪ್ ಅವರನ್ನು ಮನೆಗೆ ಕಳುಹಿಸುವ ಕಾಲ ಬಂದಿದೆ. ಅವರ ವಿರುದ್ಧ ಮತಚಲಾಯಿಸಿ’ ಎಂದು ಬೈಡೆನ್ ಕರೆ ನೀಡಿದರು.

ಸದ್ಯ ಅಮೆರಿಕದಾದ್ಯಂತ ಕೊರೊನಾ ವೈರಸ್ ಸೋಂಕಿಗೆ ಇಲ್ಲಿವರೆಗೂ 2.30 ಲಕ್ಷ ಮಂದಿ ಬಲಿಯಾಗಿದ್ದಾರೆ. 90 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಪೆನ್ಸಿಲ್ವೇನಿಯಾ ಒಂದರಲ್ಲೇ ಸುಮಾರು 9,000 ಸಾವುಗಳು ಸಂಭವಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.