ಶನಿವಾರ, ಫೆಬ್ರವರಿ 27, 2021
30 °C
ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್

ವಲಸಿಗರಿಗೆ ತ್ವರಿತವಾಗಿ ಪೌರತ್ವ ನೀಡುವ ಮಸೂದೆಗೆ ಪ್ರಸ್ತಾವನೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ತಮ್ಮ ಆಡಳಿತದ ಮೊದಲ ದಿನವೇ ನೂತನ ವಲಸೆ ನೀತಿಯ ಪ್ರಸ್ತಾವನೆ ಸಲ್ಲಿಸಲು ಯೋಜಿಸಿರುವ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್, ಕಾನೂನಿನ ಸ್ಥಾನಮಾನವಿಲ್ಲದೇ ದೇಶದಲ್ಲಿ ನೆಲೆಸಿರುವ 1.1 ಕೋಟಿ ವಲಸಿಗರಿಗೆ ತ್ವರಿತಗತಿಯಲ್ಲಿ 8 ವರ್ಷಗಳ ಅವಧಿಗೆ ಪೌರತ್ವ ಒದಗಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಟ್ರಂಪ್ ಆಡಳಿತ ನಾಲ್ಕು ವರ್ಷಗಳಿಂದ ಜಾರಿಗೊಳಿಸಿದ್ದ ನಿರ್ಬಂಧಿತ ವಲಸೆ ನೀತಿ ಮತ್ತು ಸಾಮೂಹಿಕ ಗಡಿಪಾರು ಕಾಯ್ದೆಯನ್ನು ಬೈಡನ್ ರದ್ದುಗೊಳಿಸುತ್ತಿದ್ದಾರೆ. ಇದರಿಂದ ಚುನಾವಣೆಯ ಪ್ರಚಾರದ ವೇಳೆ ವಲಸೆ ನೀತಿ ಮತ್ತು ಪೌರತ್ವದ ವಿಚಾರ ಕುರಿತು ವಿದೇಶಿ ಮೂಲದ ಮತದಾರರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಅವರು ಮುಂದಾಗಿದ್ದಾರೆ.

ಬೈಡನ್ ಜಾರಿಗೊಳಿಸುತ್ತಿರುವ ಹೊಸ ನೀತಿ, ಇತ್ತೀಚೆಗೆ ಕಾನೂನಿನ ಸ್ಥಾನಮಾನವಿಲ್ಲದೇ ಅಮೆರಿಕದಲ್ಲಿ ನೆಲಸಿರುವವರಿಗೆ ಶೀಘ್ರವಾಗಿ  ಪೌರತ್ವವನ್ನು ಒದಗಿಸುತ್ತದೆ. ಆದರೆ, ಅನೇಕ ರಿಪಬ್ಲಿಕನ್ ಪಕ್ಷದವರು ಒಲವು ಹೊಂದಿರುವ ಗಡಿ ಭದ್ರತೆಯ ಸಾಂಪ್ರದಾಯಿಕ ವ್ಯಾಪಾರ ವಹಿವಾಟನ್ನು ವೃದ್ಧಿಸುವಲ್ಲಿ ವಿಫಲವಾಗಿದೆ.

ನೂತನೆ ವಲಸೆ ನೀತಿ ಮತ್ತು ಪೌರತ್ವ ಕಾಯ್ದೆಯ ಕರಡು ಪ್ರತಿ ಸಿದ್ಧವಾಗಿದ್ದು, ಬೈಡನ್ ಅಧಿಕಾರವಹಿಸಿಕೊಂಡ ನಂತರ ಪ್ರಸ್ತಾವನೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಟ್ರಂಪ್‌ ಅವರ ವಲಸೆ ವಿರೋಧಿ ಕಾರ್ಯಾಸೂಚಿಗೆ ವಿರುದ್ಧವಾಗಿ ಹೊಸ ನೀತಿ ಜಾರಿಯಾಗುವ ಸಾಧ್ಯತೆ ಇದೆ. ದಾಖಲೆಗಳು ಇಲ್ಲದೆಯೇ ಪ್ರಸ್ತುತ ಅಮೆರಿಕದಲ್ಲಿರುವವರಿಗೆ ಪೌರತ್ವ ನೀಡುವ ವಿಷಯ ಅತ್ಯಂತ ಮಹತ್ವದ್ದಾಗಿದೆ’ ಎಂದು ರಾಷ್ಟ್ರೀಯ ವಲಸೆ ಕಾನೂನು ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಮರಲೆನಾ ಹಿಂಕಾಪಿ ವಿವರಿಸಿದ್ದಾರೆ.

ವಲಸಿಗರಿಗೆ ಸಂಬಂಧಿಸಿದ ಹೊಸ ಶಾಸನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿ ಯಶಸ್ವಿಯಾದರೆ ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಲಿದೆ. 1986ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ರೊನಾಲ್ಡ್‌ ರೇಗನ್‌ ಅವರು ಅಕ್ರಮವಾಗಿ ವಾಸಿಸುತ್ತಿದ್ದ 30 ಲಕ್ಷ ಮಂದಿಗೆ ಕಾನೂನಿನ ಸ್ಥಾನಮಾನ ನೀಡಿದ್ದರು. ಬಳಿಕ ವಲಸೆ ನೀತಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಪ್ರಯತ್ನಗಳು 2007 ಮತ್ತು 2013ರಲ್ಲಿ ನಡೆದಿದ್ದವು. ಆದರೆ, ಈ ಪ್ರಯತ್ನಗಳೆಲ್ಲ ವಿಫಲವಾಗಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು