ಲ್ಯಾಂಬ್ಡಾ: ಕೊರನಾ ವೈರಸ್‌ನ ಹೊಸ ತಳಿ

ವಿಶ್ವಸಂಸ್ಥೆ: ಕೊರನಾ ವೈರಸ್‌ನ ಹೊಸ ರೂಪಾಂತರ ತಳಿ ‘ಲ್ಯಾಂಬ್ಡಾ’ ಕಾಣಿಸಿಕೊಂಡಿದೆ. ಈ ತಳಿಯ ಸೋಂಕಿನ ಪ್ರಸರಣ ಜಗತ್ತಿಗೆ ಹೊಸ ಅಪಾಯ ತಂದೊಡ್ಡಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಅಮೆರಿಕ, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ ಸೇರಿದಂತೆ 31 ರಾಷ್ಟ್ರಗಳಲ್ಲಿ ಈ ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಈ ವರೆಗೆ ಈ ತಳಿಯ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
‘ವೈರಸ್‌ನ ಲ್ಯಾಂಬ್ಡಾ ತಳಿಯ ಸೋಂಕು ತೀವ್ರವಾಗಿ ಪ್ರಸರಣವಾಗಬಲ್ಲದು. ಅಲ್ಲದೇ, ಕೋವಿಡ್ ಲಸಿಕೆಗಳಿಗೆ ಈ ತಳಿಯ ವೈರಸ್ ಪ್ರತಿರೋಧ ಒಡ್ಡುವ ಸಾಧ್ತತೆಗಳಿವೆ. ಆದರೆ, ಈ ವಾದವನ್ನು ಪುಷ್ಟೀಕರಿಸುವ ವೈಜ್ಞಾನಿಕ ಆಧಾರಗಳು ಲಭ್ಯವಿಲ್ಲ’ ಎಂದು ಬ್ರಿಟನ್‌ನ ಆರೋಗ್ಯ ಸಂಸ್ಥೆ ‘ಪಬ್ಲಿಕ್ ಹೆಲ್ತ್ ಇಂಗ್ಲೆಂಡ್’ನ (ಪಿಎಚ್ಇ) ವಿಜ್ಞಾನಿಗಳು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.