ಮಲೇಷ್ಯಾದಲ್ಲಿ ಭೂಕುಸಿತ 18 ಸಾವು, 15 ಮಂದಿ ನಾಪತ್ತೆ

ಬತಂಗ್ ಕಲಿ: ಮಲೇಷ್ಯಾದಲ್ಲಿ ಶುಕ್ರವಾರ ಭೂಕುಸಿತದಿಂದಾಗಿ 18 ಮಂದಿ ಮೃತಪಟ್ಟಿದ್ದು, 15 ಮಂದಿ ನಾಪತ್ತೆಯಾಗಿದ್ದಾರೆ. ಮಣ್ಣಿನಡಿ ಸಿಕ್ಕಿಬಿದ್ದವರ ರಕ್ಷಣೆಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಯವ ಫಾರ್ಮ್ ತೋಟದಲ್ಲಿ ಸುಮಾರು 90 ಮಂದಿ ಕಾರ್ಮಿಕರು ನಿದ್ರಿಸುತ್ತಿದ್ದರು. ಆಗ ಸುಮಾರು 30 ಮೀಟರ್ ಎತ್ತರದಿಂದ ಭೂಮಿ ಕುಸಿದಿದೆ. ಸುಮಾರು ಮೂರು ಎಕರೆ ವ್ಯಾಪ್ತಿಯಲ್ಲಿ ಕುಸಿತ ಉಂಟಾಗಿದೆ. ಗಂಭೀರಗಾಯಗೊಂಡಿದ್ದ ಏಳು ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.