ಬುಧವಾರ, ನವೆಂಬರ್ 25, 2020
21 °C

ಎಚ್‌–1ಬಿ ವೀಸಾ: ಹೊಸ ನಿಯಮ ಪ್ರಶ್ನಿಸಿ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಎಚ್‌–1ಬಿ ವೀಸಾಕ್ಕೆ ಸಂಬಂಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಆಡಳಿತ ರೂಪಿಸಿರುವ ಹೊಸ ನಿಯಮಗಳನ್ನು ಪ್ರಶ್ನಿಸಿ ಯುಎಸ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ (ಯುಎಸ್‌ಸಿಸಿ), ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಮ್ಯಾನ್ಯುಫಾಕ್ಚರರ್ಸ್‌ (ಎನ್‌ಎಎಂ) ಸೇರಿದಂತೆ ಹಲವಾರು ಸಂಘಟನೆಗಳು ಕೋರ್ಟ್‌ ಮೊರೆ ಹೋಗಿವೆ.

‘ಈ ಹೊಸ ನಿಯಮಗಳು ಸ್ವೇಚ್ಛಾಚಾರಕ್ಕೆ ಎಡೆಮಾಡಿ ಕೊಡಲಿದ್ದು, ಇವುಗಳಿಗೆ ಗೊತ್ತುಗುರಿಯೇ ಇಲ್ಲ’ ಎಂದು ಈ ಸಂಘಟನೆಗಳು ಪ್ರತಿಪಾದಿಸಿವೆ. ಅಲ್ಲದೇ, ಈ ನಿಯಮಗಳ ಪರಿಣಾಮವಾಗಿ ಅಧಿಕ ಕೌಶಲವಿರುವ ಉದ್ಯೋಗಿಗಳು ಅಮೆರಿಕಕ್ಕೆ ಬರುವುದು ಕಷ್ಟವಾಗಲಿದೆ ಎಂದೂ ಅಭಿಪ್ರಾಯಪಟ್ಟಿವೆ.

‘ಈಗಾಗಲೇ ಅಮೆರಿಕದಲ್ಲಿ ಉದ್ಯೋಗದಲ್ಲಿರುವ, ಕುಶಲತೆ ಹೊಂದಿರುವವರನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಇದರಿಂದಾಗಿ ಉತ್ಪಾದನಾ ಕ್ಷೇತ್ರ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂಬ ಆತಂಕವನ್ನೂ ಎನ್‌ಎಎಂ,ಯುಎಸ್‌ಸಿಸಿ ವ್ಯಕ್ತಪಡಿಸಿವೆ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು