ಭಾನುವಾರ, ಅಕ್ಟೋಬರ್ 24, 2021
21 °C

ವಿದ್ಯುತ್‌ ಇಲ್ಲದೇ ಕತ್ತಲಲ್ಲಿ ಮುಳುಗಿದ ಇಡೀ ಲೆಬೆನಾನ್‌!

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ಬೈರುತ್: ಇಂಧನ ಕೊರತೆಯಿಂದಾಗಿ ದೇಶದ ಎರಡು ಅತಿದೊಡ್ಡ ವಿದ್ಯುತ್ ಕೇಂದ್ರಗಳು ಸ್ಥಗಿತಗೊಂಡಿದ್ದು, ಲೆಬನಾನ್‌ನಲ್ಲಿ ವ್ಯಾಪಕ ವಿದ್ಯುತ್ ಕಡಿತವಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

'ವಿದ್ಯುತ್ ಜಾಲವು ಇಂದು ಮಧ್ಯಾಹ್ನದ ವೇಳೆಗೆ ಸಂಪೂರ್ಣವಾಗಿ ನಿಷ್ಕ್ರಿಯವಾಯಿತು. ಮುಂದಿನ ಸೋಮವಾರದವರೆಗೆ ಅಥವಾ ಹಲವು ದಿನಗಳವರೆಗೆ ಪರಿಸ್ಥಿತಿ ಹೀಗೇ ಇರಲಿದೆ‘ ಎಂದು ಅಧಿಕಾರಿಗಳು ಹೇಳಿದರು.

ತಾತ್ಕಾಲಿಕವಾಗಿ ವಿದ್ಯುತ್ ಸ್ಥಾವರವನ್ನು ಚಾಲು ಮಾಡಲು ಸೇನೆಯ ತೈಲ ಮೀಸಲನ್ನು ಬಳಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಅದು ಕೂಡ ಅಂದುಕೊಂಡಷ್ಟು ಶೀಘ್ರದಲ್ಲಿ ಆಗುವುದಿಲ್ಲ ಎಂದು ಗೊತ್ತಾಗಿದೆ. 

ಡೀಸೆಲ್ ಜನರೇಟರ್‌ಗಳ ಮೂಲಕ  ಹಲವರು ಪರ್ಯಾಯವಾಗಿ ವಿದ್ಯುತ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. 

ವಿದ್ಯುತ್‌ ಕಡಿತದ ಹಿನ್ನೆಲೆಯಲ್ಲಿ ಇಡೀ ಲೆಬೆನಾನ್‌ ಅಂಧಕಾರದಲ್ಲಿ ಮುಳುಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು