ಲಂಡನ್: ಸೊಗಸಾದ ಮತ್ತು ಸಂಕೀರ್ಣ ನಿರೂಪಣೆಗಳಿಂದ ಬೇಹುಗಾರಿಕೆಯಂತಹ ಥ್ರಿಲ್ಲರ್ ಆಧಾರಿತ ಕಾದಂಬರಿಗಳನ್ನು ಬರೆದಿದ್ದ ಪ್ರಸಿದ್ಧ ಕಾಂದಬರಿಕಾರ ಮತ್ತು ಗೂಢಚರ್ಯೆಯ ಮಾಸ್ಟರ್ ಎಂದೇ ಪ್ರಸಿದ್ಧರಾಗಿದ್ದ ಜಾನ್ ಲೆ ಕ್ಯಾರೆ (89) ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನೈರುತ್ಯ ಇಂಗ್ಲೆಂಡ್ನ ಕೊರ್ನಾವಾಲ್ನಲ್ಲಿ ಮೃತಪಟ್ಟಿದ್ದಾರೆ ಎಂದು ಲೆ ಕ್ಯಾರೆ ಅವರ ಸಾಹಿತ್ಯ ಸಂಸ್ಥೆ ಕರ್ಟಿಸ್ ಬ್ರೌನ್ ತಿಳಿಸಿದೆ. ಅವರು ನ್ಯುಮೋನಿಯಾದಿಂದ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ ಕೋವಿಡ್–19 ದೃಢಪಟ್ಟಿರಲಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

‘ದಿ ಸ್ಪೈ ಹೂ ಕಮ್ ಇನ್ ದ ಕೋಲ್ಡ್,‘ ‘ಟಿಂಕರ್ ಟೈಲರ್ ಸೋಲ್ಜರ್ ಸ್ಪೈ‘ ಮತ್ತು ‘ದಿ ಹಾನರಬಲ್ ಸ್ಕೂಲ್ಬಾಯ್‘ ಮುಂತಾದ ಮಹತ್ತರ ಕೃತಿಗಳನ್ನು ರಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.