ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ಕಡಲ್ಗಾಲುವೆಯಲ್ಲಿ ದೋಣಿ ಮುಳುಗಿ 31 ವಲಸಿಗರು ಸಾವು

Last Updated 25 ನವೆಂಬರ್ 2021, 5:42 IST
ಅಕ್ಷರ ಗಾತ್ರ

ಪ್ಯಾರಿಸ್‌: ಬ್ರಿಟನ್‌ಗೆ ತೆರಳುತ್ತಿದ್ದ ದೋಣಿಯೊಂದು ಇಂಗ್ಲಿಷ್‌ ಕಡಲ್ಗಾಲುವೆಯಲ್ಲಿ ಮುಳುಗಿ ಕನಿಷ್ಠ 31 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ಫ್ರಾನ್ಸ್‌ನ ಆಂತರಿಕ ಸಚಿವ ಗೆರಾಲ್ಡ್‌ ಡರ್ಮನಿನ್‌ ಹೇಳಿದ್ದಾರೆ.

ಈ ಕಡಲ್ಗಾಲುವೆಯಲ್ಲಿ ಇದುವರೆಗೆ ಇಂತಹ ಭೀಕರ ದೋಣಿ ದುರಂತ ಆಗಿರಲಿಲ್ಲ ಎಂದು ಗೆರಾಲ್ಡ್‌ ಹೇಳಿದ್ದಾರೆ. ದೋಣಿಯಲ್ಲಿ ಪ್ರಯಾಣಿಸುತ್ತಿದ್ದವರ ರಾಷ್ಟ್ರೀಯತೆ ಇನ್ನೂ ತಿಳಿದುಬಂದಿಲ್ಲ. ದೋಣಿ ದಾಟುವಾಗ ಅಪರೂಪಕ್ಕೊಮ್ಮೆ ಸಾವಿನ ಪ್ರಕರಣಗಳು ವರದಿಯಾಗುತ್ತವೆ. ಆದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಾಣ ಹಾನಿಯಾಗುವುದು ಅಪರೂಪ ಎಂದು ಹೇಳಲಾಗಿದೆ.

ದೋಣಿಯಲ್ಲಿ ಒಟ್ಟು 34 ಮಂದಿ ಇದ್ದರು. 31 ಜನರ ಮೃತ ದೇಹ ಪತ್ತೆಯಾಗಿದೆ. ಇಬ್ಬರನ್ನು ರಕ್ಷಿಸಲಾಗಿದೆ. ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

‘ಈ ಘಟನೆ ಆಘಾತಕಾರಿ’ ಎಂದಿರುವ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು, ತಕ್ಷಣವೇ ವಿಪತ್ತು ನಿರ್ವಹಣಾ ಸಮಿತಿಯ ಸಭೆ ನಡೆಸಿದರೆ, ಫ್ರಾನ್ಸ್‌ನ ಆಂತರಿಕ ಸಚಿವರು ಆಸ್ಪತ್ರೆಗೆ ಧಾವಿಸಿ ಗಾಯಗೊಂಡವರ ಬಗ್ಗೆ ವಿಚಾರಿಸಿದರು.

ಕಡಲ್ಗಾಲುವೆಯನ್ನು ದಾಟಲು ವಲಸಿಗರು ಸಣ್ಣ ದೋಣಿಗಳನ್ನು ಬಳಕೆ ಮಾಡುತ್ತಿರುವುದು ಈ ವರ್ಷ ಗಣನೀಯವಾಗಿ ಹೆಚ್ಚಾಗಿದೆ. ಈ ವರ್ಷ 25,700 ಕ್ಕೂ ಹೆಚ್ಚು ಜನರು ಇಂತಹ ಪ್ರಯಾಣ ಮಾಡಿದ್ದಾರೆ. ಇದು 2020 ಇಡೀ ವರ್ಷದ ಒಟ್ಟು ಸಂಖ್ಯೆಗಿಂತ ಮೂರು ಪಟ್ಟು ಹೆಚ್ಚು ಎನ್ನಲಾಗಿದೆ.

ವಲಸಿಗರು ಅಪಾಯಕಾರಿ ಪರಿಸ್ಥಿತಿಯಲ್ಲಿ ಕಡಲ್ಗಾಲುವೆ ದಾಟುವುದನ್ನು ತಡೆಯಲು ಎರಡೂ ಸರ್ಕಾರಗಳೂ ಪ್ರಯತ್ನಿಸುತ್ತಲೇ ಇವೆ. ಇದೇ ವೇಳೆ ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂದು ಪರಸ್ಪರ ನಿಂದಿಸಿಕೊಳ್ಳುತ್ತಲೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT