ಬ್ರಿಟನ್‌ನಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು: ಸಚಿವರು, ವಿಜ್ಞಾನಿಗಳ ಕಳವಳ

ಲಂಡನ್: ಬ್ರಿಟನ್‌ನಲ್ಲಿ ಕೆಲ ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆಯು ಏರುಗತಿಯಲ್ಲಿ ಸಾಗುತ್ತಿರುವುದಕ್ಕೆ ಅಲ್ಲಿನ ಸಚಿವರು ಹಾಗೂ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬ್ರಿಟನ್‌ನಲ್ಲಿ ಸೋಮವಾರ ಹೊಸದಾಗಿ 2,948 ಕೊರೊನಾ ಪ್ರಕರಣಗಳು ವರದಿಯಾಗಿವೆ.
‘ಕೊರೊನಾ ವೈರಾಣು ಇನ್ನೂ ನಮ್ಮೊಂದಿಗಿದೆ. ಹೀಗಾಗಿ ನಾವು ಹೆಚ್ಚಿನ ಕಾಳಜಿ ವಹಿಸಬೇಕಿದೆ. ಸೋಂಕಿತರ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಎಲ್ಲರೂ ಮತ್ತಷ್ಟು ಜಾಗೃತರಾಗಿರಬೇಕು’ ಎಂದು ಗೃಹ ಕಾರ್ಯದರ್ಶಿ ರಾಬರ್ಟ್ ಜೆನ್‌ರಿಕ್ ಹೇಳಿದ್ದಾರೆ.
‘ಯುವಕರೆ ನೀವು ಹೆಚ್ಚು ಎಚ್ಚರದಿಂದಿರಿ. ನೀವು ಸೋಂಕಿತರಾಗುವ ಮೂಲಕ ಮನೆಯ ಇತರ ಸದಸ್ಯರನ್ನು ಅಪಾಯಕ್ಕೆ ತಳ್ಳಬೇಡಿ. ನಿಮ್ಮಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವ ವೇಳೆಗೆ ಅದು ಮನೆಯ ಇತರ ಸದಸ್ಯರಿಗೂ ತಗುಲಬಹುದು. ಹೀಗಾಗಿ ತುಂಬಾ ಹುಷಾರಾಗಿರಿ’ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ ಹೇಳಿದ್ದರು.
‘ಜನರಲ್ಲಿ ಮೊದಲಿದ್ದ ಭಯ ದೂರವಾಗಿದೆ. ಕೋವಿಡ್‌ನಿಂದ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಎಲ್ಲರೂ ಇನ್ನು ಮುಂದೆಯೂ ಮೊದಲಿನಷ್ಟೇ ಎಚ್ಚರದಿಂದ ಇರಬೇಕು’ ಎಂದು ಇಂಗ್ಲೆಂಡ್‌ನ ವೈದ್ಯಾಧಿಕಾರಿ ಜೊನಾಥನ್ ವಾನ್ ಟಾಮ್ ಎಚ್ಚರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.