ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆಯಿಂದ ಕೆಲವು ವರ್ಷಗಳ ವರೆಗೆ ರಕ್ಷಣೆ: ಮಾಡೆರ್ನಾ ಕಂಪೆನಿ ಸಿಇಒ ಭರವಸೆ

Last Updated 8 ಜನವರಿ 2021, 4:10 IST
ಅಕ್ಷರ ಗಾತ್ರ

ಪ್ಯಾರಿಸ್: ಮಾಡೆರ್ನಾ ಕಂಪೆನಿಯ ಕೋವಿಡ್–19 ಲಸಿಕೆಯು ಒಂದೆರಡು ವರ್ಷಗಳ ವರೆಗೆ ರಕ್ಷಣೆ ನೀಡಲಿದೆ ಎಂದು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

ಜಾಗತಿಕ ಪಿಡುಗು ನಿವಾರಣೆಗಾಗಿ ವಿವಿಧ ಕಂಪೆನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗಳ ತುರ್ತು ಬಳಕೆಗೆ ಕೆಲವು ದೇಶಗಳಲ್ಲಿ ಅನುಮತಿ ನೀಡಲಾಗಿದೆ. ಇದೇ ವೇಳೆ ಅಮೆರಿಕ ಮೂಲದ ಮಾಡರ್ನಾ ಕಂಪೆನಿಯ ಲಸಿಕೆ ಬಳಕೆಗೆ ಯುರೋಪಿಯನ್‌ ಒಕ್ಕೂಟ ಬುಧವಾರ ಅನುಮೋದನೆ ದೊರೆತಿದೆ.

‘ಲಸಿಕೆಯು ಕೇವಲ ಒಂದು ಅಥವಾ ಎರಡು ತಿಂಗಳವರೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಎನ್ನಲಾಗುತ್ತಿದೆ.ಆದರೆ, ಲಸಿಕೆಯಿಂದ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯ ಸಾಮರ್ಥ್ಯವು ತುಂಬಾ ನಿಧಾನವಾಗಿ ಕಡಿಮೆಯಾಗುವುದರಿಂದ ಇದು ಒಂದೆರಡು ವರ್ಷಗಳವರೆಗೆ ರಕ್ಷಣೆ ನೀಡುತ್ತದೆ ಎಂದು ನಾವು ನಂಬಿದ್ದೇವೆ’ ಎಂದು ಕಂಪೆನಿಯ ಸಿಇಒ ಸ್ಟೀಫನ್‌ ಬನ್ಸಲ್‌ ತಿಳಿಸಿದ್ದಾರೆ.

ಬ್ರಿಟನ್‌ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ರೂಪಾಂತರ ವೈರಸ್‌ನ ವಿರುದ್ಧವೂ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಬನ್ಸಲ್‌ ಹೇಳಿದ್ದಾರೆ. ಹೊಸದಾಗಿ ಅಭಿವೃದ್ಧಿಪಡಿಸುವ ಲಸಿಕೆಗಳುಎರಡೂ ಮಾದರಿಯ (ಸಾಮಾನ್ಯ ಮತ್ತು ರೂಪಾಂತರ) ವೈರಸ್‌ಗೆ ಪರಿಣಾಮಕಾರಿಯಾಗಿರಬೇಕು ಎಂಬುದು ವಿಜ್ಞಾನಿಗಳ ಒತ್ತಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT