ಗುರುವಾರ , ಮಾರ್ಚ್ 4, 2021
24 °C

ಮಿಲಿಟರಿ ದಂಗೆ ವಿರೋಧಿಸಿ ಮ್ಯಾನ್ಮಾರ್‌ನಲ್ಲಿ ಮತ್ತೆ ಬೀದಿಗಿಳಿದ ಜನ

ಎಪಿ Updated:

ಅಕ್ಷರ ಗಾತ್ರ : | |

Prajavani

ಯಾಂಗೂನ್‌: ದೇಶದಲ್ಲಿ ಮಿಲಿಟರಿ ದಂಗೆಯನ್ನು ವಿರೋಧಿಸಿ ಜನರು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.

ದೇಶದ ದೊಡ್ಡ ನಗರವಾದ ಯಾಂಗೂನ್‌ನಲ್ಲಿ ಮಂಗಳವಾರ ಪ್ರತಿಭಟನಕಾರರು ಬೀದಿಗಿಳಿದಿದ್ದಾರೆ. ಪ್ರಮುಖ ಸ್ಥಳವಾದ ಹೇಡನ್‌ ಸೆಂಟರ್‌ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜಮಾಯಿಸಿರುವ ಜನರು, ಮಿಲಿಟರಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೋಮವಾರವೂ ದೇಶದಾದ್ಯಂತ ಪ್ರತಿಭಟನೆ ನಡೆದಿತ್ತು. ಅಂದಿನ ಸಂಖ್ಯೆಗೆ ಹೋಲಿಸಿದರೆ ಮಂಗಳವಾರ ಪ್ರತಿಭಟನಕಾರರ ಸಂಖ್ಯೆ ಕಡಿಮೆ ಇತ್ತು.

ಗುಂಪನ್ನು ಚದುರಿಸಲು ಶನಿವಾರ ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು. ಈ ಪೈಕಿ 37 ವರ್ಷದ ಥೆಟ್‌ ನೈಂಗ್‌ ವಿನ್‌ ಎಂಬುವವರ ಅಂತ್ಯಸಂಸ್ಕಾರ ಮಂಡಲೇ ನಗರದಲ್ಲಿ ನೆರವೇರಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು