ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಉಚ್ಛಾಟಿತ ನಾಯಕರಿಗೆ ‘ಭಯೋತ್ಪಾದಕರ’ ಪಟ್ಟ ನೀಡಿದ ಸೇನೆ

Last Updated 9 ಮೇ 2021, 6:05 IST
ಅಕ್ಷರ ಗಾತ್ರ

ಬ್ಯಾಂಕಾಕ್‌: ಮ್ಯಾನ್ಮಾರ್‌ನ ಸೇನಾ ಆಡಳಿತವು ಉಚ್ಛಾಟಿತ ಶಾಸಕರು ಮತ್ತು ರಾಜಕೀಯ ನಾಯಕರನ್ನು ‘ಭಯೋತ್ಪಾದಕರು’ ಎಂದು ಕರೆದಿದೆ.

‘ದೇಶದ ಭದ್ರತಾ ಪಡೆಯು ಉಗ್ರರ ಗುಂಪುಗಳನ್ನು ಎದುರಿಸಲು ಸ್ಥಾಪಿಸಲಾಗಿರುವ ರಕ್ಷಣಾ ಪಡೆ’ ಎಂದು ಮ್ಯಾನ್ಮಾರ್‌ನ ಸೇನೆಯು ಹೇಳಿದೆ.

ಈ ಹಿಂದೆ ಉಚ್ಛಾಟಿತ ನಾಯಕರನ್ನು ದೇಶದ್ರೋಹಿಗಳೆಂದು ಸೇನೆಯು ಆರೋಪಿಸಿತ್ತು. ಇದೀಗ ಸೇನೆಯು ಅವರನ್ನು ‘ಭಯೋತ್ಪಾದಕರು’ ಎಂದು ಕರೆದಿದೆ. ಈ ಬಗ್ಗೆ ಮ್ಯಾನ್ಮಾರ್‌ನ ಸೇನೆಯು ಸರ್ಕಾರಿ ಟಿವಿಯಲ್ಲಿ ಶನಿವಾರ ಘೋಷಣೆ ಮಾಡಿದ್ದು, ‘ಮಿಲಿಟರಿ ವಿರುದ್ಧದ ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಅವರನ್ನು ಭಯೋತ್ಪಾದಕರು’ ಎಂದು ಕರೆಯಲಾಗುತ್ತಿದೆ ಎಂದು ಹೇಳಿದೆ.

ಫೆಬ್ರವರಿ 1ರಿಂದ ಮ್ಯಾನ್ಮಾರ್‌ಲ್ಲಿ ಮಿಲಿಟರಿ ಆಡಳಿತ ಆರಂಭವಾಗಿದೆ.ನಾಯಕಿ ಆಂಗ್ ಸಾನ್ ಸೂಕಿ ನೇತೃತ್ವದ ಪ್ರಜಾಪ್ರತಿನಿಧಿ ಸರ್ಕಾರವನ್ನು ಬುಡಮೇಲುಗೊಳಿಸಿ, ಸೇನೆ ತನ್ನ ಆಡಳಿತವನ್ನು ಸ್ಥಾಪಿಸಿತು. ಇದನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದ್ದು, 700 ಕ್ಕೂ ಹೆಚ್ಚು ಮಂದಿಯನ್ನು ಕೊಲ್ಲಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT