ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಸೂ ಕಿ ವಿರುದ್ಧದ ವಿಚಾರಣೆ 14ರಿಂದ ಆರಂಭ

Last Updated 8 ಜೂನ್ 2021, 6:19 IST
ಅಕ್ಷರ ಗಾತ್ರ

ನೆಪಿಟಾ, ಮ್ಯಾನ್ಮಾರ್‌: ಪದಚ್ಯುತಗೊಂಡಿರುವ ನಾಯಕಿ ಆಂಗ್‌ ಸಾನ್‌ ಸೂ ಕಿ ಅವರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಮಿಲಿಟರಿ ಆಡಳಿತವು ಮುಂದಿನ ಸೋಮವಾರ (ಜೂ. 14) ಆರಂಭಿಸಲಿದೆ ಎಂದು ಸೂ ಕಿ ಪರ ವಕೀಲರು ಹೇಳಿದ್ದಾರೆ.

ಜೂನ್‌ 28ರ ವರೆಗೆ ಮಿಲಿಟರಿ ಸರ್ಕಾರ ತನ್ನ ವಾದ ಮಂಡನೆ ಮಾಡುವುದು. ನಂತರ ಜುಲೈ 26ರ ವರೆಗೆ ಸೂ ಕಿ ಪರ ವಾದ ಮಂಡನೆಗೆ ಅವಕಾಶ ಇರಲಿದೆ ಎಂದು ಅವರ ಪರ ವಕೀಲರ ತಂಡದ ಹಿರಿಯ ಸದಸ್ಯ ಖಿನ್‌ ಮೌಂಗ್‌ ಝಾ ಹೇಳಿದ್ದಾರೆ. ಸೋಮವಾರ ಮತ್ತು ಮಂಗಳವಾರ ಮಾತ್ರ ಪ್ರಕರಣದ ವಿಚಾರಣೆ ನಡೆಯುವುದು.

ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಮ್ಯಾನ್ಮಾರ್‌ ಮಿಲಿಟರಿ ಫೆಬ್ರುವರಿಯಲ್ಲಿ ಪದಚ್ಯುತಗೊಳಿಸಿದೆ. ದಂಗೆಗೆ ಪ್ರಚೋದಿಸುವಂಥ ಮಾಹಿತಿಯನ್ನು ಪ್ರಸಾರ ಮಾಡಿರುವುದು, ಕಳೆದ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಕೋವಿಡ್‌–19 ಪಿಡುಗಿನ ಕಾರಣ ಜಾರಿಗೊಳಿಸಿದ್ದ ನಿರ್ಬಂಧಗಳ ಉಲ್ಲಂಘನೆ, ತಮ್ಮ ಅಂಗರಕ್ಷಕರು ಬಳಸಲು ವಾಕಿ–ಟಾಕಿ ಸಾಧನಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡಿರುವುದು ಹಾಗೂ ಪರವಾನಗಿ ಇಲ್ಲದೇ ರೇಡಿಯೊ ಬಳಸಿದ ಆರೋಪಗಳನ್ನು ಸೂ ಕಿ ಅವರ ವಿರುದ್ಧ ಹೊರಿಸಲಾಗಿದೆ.

ಚುನಾಯಿತ ಸರ್ಕಾರವನ್ನು ಕಿತ್ತೊಗೆದ ಮಿಲಿಟರಿ ಕ್ರಮವನ್ನು ಖಂಡಿಸಿ ಮ್ಯಾನ್ಮಾರ್‌ನಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ನೂರಾರು ಪ್ರತಿಭಟನಕಾರರನ್ನು ಮಿಲಿಟರಿ ಹತ್ಯೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT