ಗುರುವಾರ , ಅಕ್ಟೋಬರ್ 22, 2020
24 °C

ಬಾಹ್ಯಾಕಾಶ ಕೇಂದ್ರದಿಂದಲೇ ಮತ ಚಲಾಯಿಸಲು ನಾಸಾ ಗಗನಯಾತ್ರಿ ಚಿಂತನೆ

ಎ.ಪಿ Updated:

ಅಕ್ಷರ ಗಾತ್ರ : | |

Prajavani

ಅಟ್ಲಾಂಟಾ: ‘ಭೂಮಿಗೆ ಸುಮಾರು 200 ಮೈಲು ಎತ್ತರದಲ್ಲಿ ಬಾಹ್ಯಾಕಾಶದಿಂದಲೇ ನಾನು ನನ್ನ ಮತಹಕ್ಕು ಚಲಾಯಿಸಲು ಯೋಜಿಸುತ್ತಿದ್ದೇನೆ’ ಎಂದು ನಾಸಾ ಗಗನಯಾತ್ರಿ ಕೇಟ್ ರೂಬಿನ್ಸ್ ಹೇಳಿದ್ದಾರೆ.

ರೂಬಿನ್ಸ್‌ ಸದ್ಯ ಮಾಸ್ಕೊದಲ್ಲಿದ್ದು, ಅಕ್ಟೋಬರ್ ಮಧ್ಯಭಾಗದಲ್ಲಿ ಇತರೆ ಇಬ್ಬರು ಗಗನಯಾತ್ರಿಗಳೊಂದಿಗೆ ಅಂತರಿಕ್ಷಕ್ಕೆ ಪ್ರಯಾಣಿಸಲಿದ್ದು, ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಆರು ತಿಂಗಳು ವಾಸ್ತವ್ಯ ಹೂಡಲಿದ್ದಾರೆ.

‘ಪ್ರತಿಯೊಬ್ಬರು ಮತಹಕ್ಕು ಚಲಾಯಿಸುವುದು ಮುಖ್ಯ. ನಾವು ಅದನ್ನು ಬಾಹ್ಯಾಕಾಶದಿಂದಲೇ ಮಾಡುವುದು ಸಾಧ್ಯವಾದರೆ, ಭೂಮಿಯಲ್ಲಿಯೇ ಇದ್ದವರು ಖಂಡಿತವಾಗಿ ಈ ಕಾರ್ಯ ಮಾಡಬಹುದು’ ಎಂದು ರೂಬಿನ್ಸ್ ಪ್ರತಿಕ್ರಿಯಿಸಿದ್ದಾರೆ.

ಬಹುತೇಕ ಗಗನಯಾತ್ರಿಗಳು ಹೂಸ್ಟನ್‌ನಲ್ಲಿ ನೆಲೆಸಿದ್ದಾರೆ. ಟೆಕ್ಸಾಸ್‌ನಲ್ಲಿ ಚಾಲ್ತಿಯಲ್ಲಿರುವ ಕಾಯ್ದೆಗಳ ಪ್ರಕಾರ, ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿ ಬಾಹ್ಯಾಕಾಶದಿಂದಲೇ ಮತಚಲಾಯಿಸಲು ಅವಕಾಶವಿದೆ.

‘ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ಮತಚಲಾಯಿಸಲು ಅವಕಾಶ ದೊರೆತಿರುವುದು ನಮ್ಮ ಪಾಲಿನ ಗೌರವ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು