ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನಿಂದ ತಂದ ದೂಳು ವಾಪಸ್‌ ಕೊಡಿ: ಹರಾಜು ಸಂಸ್ಥೆಗೆ ಸೂಚಿಸಿದ ನಾಸಾ

1969ರ ಅಪೊಲೊ 11 ಕಾರ್ಯಾಚಣೆ ವೇಳೆ ಸಂಗ್ರಹ
Last Updated 24 ಜೂನ್ 2022, 16:58 IST
ಅಕ್ಷರ ಗಾತ್ರ

ಬಾಸ್ಟನ್: 1969ರಲ್ಲಿ ಕೈಗೊಂಡಿದ್ದ ಬಾಹ್ಯಾಕಾಶ ಕಾರ್ಯಕ್ರಮದಡಿ ‘ಅಪೊಲೊ 11’ ಗಗನನೌಕೆಯು ಚಂದ್ರನಿಂದ ಸಂಗ್ರಹಿಸಿದ್ದ ದೂಳು ಮತ್ತು ಪ್ರಯೋಗಕ್ಕೆ ಬಳಸಿದ್ದ ಜಿರಳೆಗಳನ್ನು ಮಾರಾಟ ಮಾಡದಂತೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ನಾಸಾ) ಬಾಸ್ಟನ್ ಮೂಲದ ಹರಾಜು ಕಂಪನಿ ಆರ್‌ಆರ್‌ ಆಕ್ಷನ್‌ಗೆ ಸೂಚಿಸಿದೆ.

ಸುಮಾರು 40 ಮಿಲಿ ಗ್ರಾಂ ಚಂದ್ರನ ದೂಳು ಮತ್ತು ಮೂರು ಮೃತ ಜಿರಳೆಗಳನ್ನು ಹೊಂದಿರುವ ಸೀಸೆ ಸೇರಿದಂತೆ ಪ್ರಯೋಗಕ್ಕೆ ಬಳಸಬೇಕಿದ್ದ ವಸ್ತುಗಳು ಕನಿಷ್ಠ ₹ 3.13 ಕೋಟಿಗೆ (4 ಲಕ್ಷ ಡಾಲರ್) ಮಾರಾಟವಾಗುವ ನಿರೀಕ್ಷೆಯಿತ್ತು. ಆದರೆ, ನಾಸಾದ ಸೂಚನೆ ಮೇರೆಗೆ ಅವುಗಳನ್ನು ಹರಾಜಿನಿಂದ ವಾಪಸ್‌ ಪಡೆಯಲಾಗಿದೆ ಆರ್‌ಆರ್ ಆಕ್ಷನ್ ತಿಳಿಸಿದೆ.

‘ಅಪೊಲೊ 11’ ಗಗನನೌಕೆಯು ಚಂದ್ರನಿಂದ 21.3 ಕೆ.ಜಿ ಶಿಲೆಗಳನ್ನು ಭೂಮಿಗೆ ಹೊತ್ತುತಂದಿತ್ತು. ಈ ಪೈಕಿ ಒಂದಿಷ್ಟನ್ನು ಕ್ರಿಮಿ ಕೀಟಗಳಿಗೆ ತಿನಿಸಿ, ಚಂದ್ರನ ಶಿಲೆಗಳಲ್ಲಿ ರೋಗಕಾರಕ ಅಂಶವಿದೆಯೇ ಎಂಬುದನ್ನು ಪತ್ತೆ ಮಾಡಲು ಪರೀಕ್ಷೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT