ಬುಧವಾರ, ಜೂನ್ 23, 2021
30 °C

ಕೋವಿಡ್ ನಡುವೆಯೂ ದಾಖಲೆ ಪ್ರಮಾಣದಲ್ಲಿ ಮೌಂಟ್‌ ಎವರೆಸ್ಟ್‌ ಚಾರಣಕ್ಕೆ ಪರವಾನಗಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳವು ಕೊರೊನಾ ಸಾಂಕ್ರಾಮಿಕದ ನಡುವೆ ಈ ವರ್ಷ ವಿಶ್ವದ ಅತ್ಯುನ್ನತ ಶಿಖರ ಮೌಂಟ್‌ ಎವರೆಸ್ಟ್‌ ಚಾರಣಕ್ಕಾಗಿ ದಾಖಲೆ ಪ್ರಮಾಣದಷ್ಟು ಪರವಾನಗಿಯನ್ನು ನೀಡಿದೆ.

‘ಈ ವರ್ಷ, ಶುಕ್ರವಾರದ ತನಕ ಮೌಂಟ್‌ ಎವರೆಸ್ಟ್‌ ಚಾರಣಕ್ಕಾಗಿ 394 ಪರವಾನಗಿಗಳನ್ನು ನೀಡಲಾಗಿದೆ. 2019ರಲ್ಲಿ 381 ಪರವಾನಗಿಗಳನ್ನು ನೀಡಲಾಗಿತ್ತು’ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಮೀರಾ ಆಚಾರ್ಯ ಅವರು ತಿಳಿಸಿದರು.

ಓದಿ: 

ನೇಪಾಳವು ಮೌಂಟ್‌ ಎವರೆಸ್ಟ್‌ ಚಾರಣದಿಂದ ಬರುವ ಆದಾಯ ಮೇಲೆ ಹೆಚ್ಚು ಅವಲಂಬಿತವಾಗಿದೆ.

ಈ ವಾರ ಎವರೆಸ್ಟ್‌ ಬೇಸ್‌ ಕ್ಯಾಂಪ್‌ನಲ್ಲಿ ಮೊದಲ ಕೋವಿಡ್‌ ‍ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗೆ ಆಗಮಿಸುವ ಮುನ್ನ ಪರ್ವತಾರೋಹಿಗಳು ಕ್ವಾರಂಟೈನ್‌ಗೆ ಒಳಗಾಗುವಂತೆ  ನೇಪಾಳ ಸರ್ಕಾರ ಸೂಚಿಸಿದೆ.

ಈವರೆಗೆ ನೇಪಾಳದಲ್ಲಿ 2,97,087 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 3,136 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು