ಭಾನುವಾರ, ಜೂನ್ 26, 2022
24 °C

ನೇಪಾಳ: ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ನಾಪತ್ತೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕಠ್ಮಂಡು: ನಾಲ್ವರು ಭಾರತೀಯರ ಸಹಿತ 22 ಮಂದಿ ಪ್ರಯಾಣಿಸುತ್ತಿದ್ದ ನೇಪಾಳದ ಲಘು ವಿಮಾನವೊಂದು ಸಂಪರ್ಕ ಕಳೆದುಕೊಂಡು ಭಾನುವಾರ ನಾಪತ್ತೆಯಾಗಿದೆ. 

ತಾರಾ ಏರ್‌ ಸಂಸ್ಥೆಯ 9 ಎನ್‌ಎಇಟಿ ಮಾದರಿಯ ಎರಡು ಎಂಜಿನ್‌ನ ವಿಮಾನವು ಪೊಖ್ರಾದಿಂದ ಜೊಮ್‌ಸೊಮ್‌ಗೆ ಹೊರಟಿತ್ತು. ಬೆಳಿಗ್ಗೆ 9.55ರ ಸುಮಾರಿಗೆ ವಿಮಾನವು ನಿಯಂತ್ರಣ ಕಚೇರಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ನಾಪತ್ತೆಯಾಗಿರುವ ವಿಮಾನದ ಹುಡುಕಾಟಕ್ಕಾಗಿ ಎರಡು ಸೇನಾ ಹೆಲಿಕಾಪ್ಟರ್‌ಗಳನ್ನು ನಿಯೋಜನೆ ಮಾಡಲಾಗಿದೆ ಎಂದು ನೇಪಾಳ ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. 
 

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು