ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್ 5ರಂದು ಬ್ರಿಟನ್ ನೂತನ ಪ್ರಧಾನಿ ಘೋಷಣೆ, ಆಕಾಂಕ್ಷಿಗಳ ಸಂಖ್ಯೆ 11ಕ್ಕೆ

Last Updated 12 ಜುಲೈ 2022, 1:27 IST
ಅಕ್ಷರ ಗಾತ್ರ

ಲಂಡನ್: ಬೋರಿಸ್‌ ಜಾನ್ಸನ್‌ ರಾಜೀನಾಮೆಯಿಂದ ತೆರವಾಗಲಿರುವಬ್ರಿಟನ್ಪ್ರಧಾನಿ ಸ್ಥಾನಕ್ಕೆ ನೂತನ ನಾಯಕನ ಹೆಸರನ್ನು ಸೆಪ್ಟೆಂಬರ್‌ 5ರಂದು ಘೋಷಣೆ ಮಾಡಲಾಗುವುದು ಎಂದು ಕನ್ಸರ್ವೇಟಿವ್‌ ಪಕ್ಷದ (ಬ್ಯಾಕ್‌ಬೆಂಜ್‌ ಸಮಿತಿ–1922) ಮುಖ್ಯಸ್ಥ ಗ್ರಹಾಂ ಬ್ರಾಡಿ ಸೋಮವಾರ ತಿಳಿಸಿದ್ದಾರೆ.

ಪಕ್ಷದ ನಾಯಕತ್ವ ಚುನಾವಣೆಯು ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಿದೆ. ನಾಮ ನಿರ್ದೇಶನ ಮಾಡುವ ಅಭ್ಯರ್ಥಿಗಳು 20 ಸಂಸದರ ಬೆಂಬಲ ಹೊಂದಿರಬೇಕು.ಪಕ್ಷದಸಂಸದರ ಮೊದಲ ಸುತ್ತಿನ ಮತದಾನ ಬುಧವಾರ ನಡೆಯಲಿದೆ. ಅಭ್ಯರ್ಥಿಗಳು ಗುರುವಾರ ನಡೆಯುವ ಎರಡನೇ ಸುತ್ತಿಗೆ ಪ್ರವೇಶಿಸಲು 30 ಮತಗಳನ್ನು ಪಡೆಯಬೇಕಾಗುತ್ತದೆ ಎಂದು ಅವರು ಪಕ್ಷದ ಸಭೆಯಲ್ಲಿ ಹೇಳಿದ್ದಾರೆ.

ಸದ್ಯ ಬ್ರಿಟನ್‌ ಪ್ರಧಾನಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ 11ಕ್ಕೇರಿದೆ.

ಭಾರತ ಮೂಲದ ಮಾಜಿ ಹಣಕಾಸು ಸಚಿವ ರಿಷಿ ಸುನಕ್‌,ವಾಣಿಜ್ಯ ಸಚಿವ ಪೆನ್ನಿ ಮೊರ್ಡಾಂಟ್, ವಿದೇಶಾಂಗ ಸಚಿವೆ ಲಿಜ್‌ ಟ್ರಸ್‌,ಮುಜಾಫರಾಬಾದ್‌ನಲ್ಲಿ ಜನಿಸಿದ ರೆಹಮಾನ್‌ ಚಿಸ್ತಿ,ಮತ್ತೊಬ್ಬ ಭಾರತೀಯ ಸಂಜಾತೆ ಗೋವಾದ ಸುವೆಲಾ ಬ್ರೇವರ್‌ಮನ್‌, ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್, ಪಾಕಿಸ್ತಾನಿ ಮೂಲದ ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್,ಇರಾಕ್‌ ಮೂಲದ ನಾಧಿಮ್ ಜಹಾವಿ, ನೈಜೀರಿಯಾ ಮೂಲದ ಕೆಮಿ ಬೆಡಾನೋಚ್ ಮತ್ತು ಟಾಮ್ ತುಗೆಂಧತ್ ಅವರು ರೇಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT