ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಟೆಯೊಳಗೆಯೇ ಕೋವಿಡ್‌ ಪರೀಕ್ಷೆಗೆ ‘ಕೋವರ್‌ಸ್ಕ್ಯಾನ್‌’

Last Updated 4 ಜುಲೈ 2022, 13:31 IST
ಅಕ್ಷರ ಗಾತ್ರ

ಹ್ಯೂಸ್ಟನ್ (ಪಿಟಿಐ): ಸಾರ್ಸ್‌ ಕೋವ್‌–2ನ ವಿವಿಧ ರೂಪಾಂತರ ತಳಿಗಳನ್ನು ಗಂಟೆಯೊಳಗೆ ಖಚಿತವಾಗಿ ಪತ್ತೆ ಹಚ್ಚುವ ‘ಕೋವರ್‌ಸ್ಕ್ಯಾನ್‌’ ರ್‍ಯಾಪಿಡ್‌ ಪರೀಕ್ಷಾ ವಿಧಾನವನ್ನು ಅಮೆರಿಕದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಟೆಕ್ಸಾಸ್‌ ವಿಶ್ವವಿದ್ಯಾಲಯದ ಸೌಥ್‌ವೆಸ್ಟರ್ನ್‌ ಮೆಡಿಕಲ್‌ ಸೆಂಟರ್‌ನ ಸಂಶೋಧನಾರ್ಥಿಗಳು ‘ಕೋವರ್‌ಸ್ಕ್ಯಾನ್‌’ ಮೂಲಕ 4 ಸಾವಿರಕ್ಕೂ ಹೆಚ್ಚು ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದಾರೆ.

ಈ ಸಂಶೋಧನೆ ಕುರಿತು ಇತ್ತೀಚೆಗೆ ಕ್ಲಿನಿಕಲ್‌ ಕೆಮಿಸ್ಟ್ರಿ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಕೋವಿಡ್‌–19 ಅನ್ನು ಪತ್ತೆ ಹಚ್ಚಲು ನಡೆಸುವ ಈ ವಿಧಾನದ ಪರೀಕ್ಷೆಯು ಇತರ ವಿಧಾನಗಳಂತೆ ನಿಖರವಾಗಿದೆ ಮತ್ತು ಸಾರ್ಸ್‌ ಕೋವ್‌–2ನ ವಿವಿಧ ರೂಪಾಂತರ ತಳಿಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತೋರಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಲಾಗಿದೆ.

‘ಈ ಪರೀಕ್ಷಾ ವಿಧಾನದ ಮೂಲಕ ಕ್ಷಿಪ್ರಗತಿಯಲ್ಲಿ ಕೋವಿಡ್‌ ರೂಪಾಂತರಿಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಮೂಲಕ ಸಮುದಾಯದಲ್ಲಿ ಹರಡುತ್ತಿರುವ ತಳಿ ಯಾವುದು ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಬಹುದು’ ಎಂದು ಈ ಕುರಿತ ಅಧ್ಯಯನದಲ್ಲಿ ತೊಡಗಿರುವ ಹಿರಿಯ ಸಂಶೋಧಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT