ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇನ್‌ ವಾರ್ನ್‌ ಸಾವಿನಲ್ಲಿ ಯಾವುದೇ ಶಂಕೆ ಇಲ್ಲ: ಥಾಯ್ಲೆಂಡ್‌ ಪೊಲೀಸರ ಸ್ಪಷ್ಟನೆ

Last Updated 5 ಮಾರ್ಚ್ 2022, 5:23 IST
ಅಕ್ಷರ ಗಾತ್ರ

ಕೋ ಸೆಮೈನ್‌: ‘ಥಾಯ್ ಹಾಲಿಡೇ ಐಲ್ಯಾಂಡ್ ಬಂಗಲೆಯಲ್ಲಿ ಸಂಭವಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಅವರ ಸಾವಿನಲ್ಲಿ ಯಾವುದೇ ಶಂಕೆಗಳಿಲ್ಲ. ಹಿಂಸಾಕೃತ್ಯದಿಂದ ಸಾವು ಸಂಭವಿಸಿಲ್ಲ’ ಎಂದು ಸ್ಥಳೀಯ ಪೊಲೀಸರು ಶನಿವಾರ ಸ್ಪಷ್ಟಪಡಿಸಿದ್ದಾರೆ.

‘ಘಟನಾ ಸ್ಥಳದಲ್ಲಿ ಯಾವುದೇ ಹಿಂಸಾಕೃತ್ಯ ಸಂಭವಿಸಿಲ್ಲ ಎಂಬುದು ನಮ್ಮ ತನಿಖೆಯಿಂದ ಗೊತ್ತಾಗಿದೆ’ ಎಂದು ಥಾಯ್ಲೆಂಡ್‌ ಪೊಲೀಸ್ ಅಧಿಕಾರಿಗಳು ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದ್ದಾರೆ.

ಶುಕ್ರವಾರ ಕೋ ಸೆಮೈನ್‌ ದ್ವೀಪದಲ್ಲಿರುವ ಸಮುಜನಾ ಬಂಗಲೆಯಲ್ಲಿ 52 ವರ್ಷ ವಯಸ್ಸಿನ ಶೇನ್‌ ವಾರ್ನ್‌ ನಿಶ್ತೇಜರಾಗಿ ಪತ್ತೆಯಾಗಿದ್ದರು. ಅವರು ನಿಧನ ಹೊಂದಿರುವುದು ನಂತರ ಗೊತ್ತಾಗಿತ್ತು.

‘ಆಸ್ಟ್ರೇಲಿಯಾದ ನಿವೃತ್ತ ಲೆಗ್‌ಸ್ಪಿನ್ನರ್ ಶೇನ್ ಕೀತ್ ವಾರ್ನ್ ಥಾಯ್ಲೆಂಡ್‌ನ ಕೋ ಸೆಮೈನಲ್ಲಿ ನಿಧನರಾದರು. ಅವರಿಗೆ ಹೃದಯಾಘಾತವಾಗಿದೆಯೆನ್ನಲಾಗಿದೆ. ತಮ್ಮ ವಿಲ್ಲಾ (ಬಂಗಲೆ)ದಲ್ಲಿ ಅವರಿದ್ದರು. ಶುಕ್ರವಾರ ಸಂಜೆ ಅವರು ನಿಸ್ತೇಜರಾದಾಗ, ವೈದ್ಯಕೀಯ ತಂಡವು ನೀಡಿದ ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ‘ ಎಂದು ವಾರ್ನ್‌ ಅವರ ಮ್ಯಾನೇಜ್‌ಮೆಂಟ್ ತಂಡವು ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT