ಗುರುವಾರ , ಜುಲೈ 7, 2022
23 °C

ಚೀನಾ ವಿಮಾನ ಪತನ: ಮುಂದುವರಿದ ಶೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಚೀನಾದ ದಕ್ಷಿಣ ಭಾಗದ ಪರ್ವತ ಪ್ರದೇಶದಲ್ಲಿ ಸೋಮವಾರ ಪತನವಾದ ವಿಮಾನದಲ್ಲಿದ್ದ 132 ಪ್ರಯಾಣಿಕರಲ್ಲಿ ಯಾರೊಬ್ಬರೂ ಬದುಕುಳಿದಿರುವುದು ಗೊತ್ತಾಗಿಲ್ಲ. ಆದಾಗ್ಯೂ, ವಿಮಾನ ಪತನವಾದ ಸ್ಥಳದಲ್ಲಿ ಮಂಗಳವಾರವೂ ಶೋಧ ಕಾರ್ಯಾಚರಣೆ ಮುಂದುವರಿಯಿತು. 

ಜತೆಗೆ ವಿಮಾನದ ಪತನಕ್ಕೆ ಕಾರಣವೇನು ಎಂಬುದರ ತನಿಖೆಗೆ ಸಹಕಾರಿಯಾಗುವ ಬ್ಲಾಕ್ ಬಾಕ್ಸ್ ಸಹ ಇನ್ನೂ ಪತ್ತೆಯಾಗಿಲ್ಲ. ವಿಮಾನ ಪತನವಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ಸಿಬ್ಬಂದಿ, ಸೋಮವಾರ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದರು. ವಿಮಾನ ದುರಂತದ ತನಿಖೆಗೆ ಚೀನಾ ಈಸ್ಟರ್ನ್ ಏರ್‌ಲೈನ್ಸ್ ಜೊತೆ ಸಹಕರಿಸುವುದಾಗಿ ಬೋಯಿಂಗ್ ಸಂಸ್ಥೆ ತಿಳಿಸಿದೆ.

ದುರಂತದ ಹಿನ್ನೆಲೆಯಲ್ಲಿ ತನ್ನಲ್ಲಿರುವ ಎಲ್ಲಾ ಬೋಯಿಂಗ್‌ 737-800 ವಿಮಾನಗಳ ಹಾರಾಟವನ್ನು ಚೀನಾ ಈಸ್ಟರ್ನ್‌ ಏರ್‌ಲೈನ್ಸ್‌ ಸ್ಥಗಿತಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು