ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಎರಡನೇ ಸುತ್ತಿನ ಲಸಿಕೆಯಿಂದ ಸಹಜ ಸ್ಥಿತಿಗೆ ಮರಳುವ ಸಾಧ್ಯತೆ

ಮೈಕ್ರೊಸಾಫ್ಟ್‌ ಕಂಪನಿ ಸಹ–ಸಂಸ್ಥಾಪಕ ಬಿಲ್‌ಗೇಟ್ಸ್‌
Last Updated 13 ಅಕ್ಟೋಬರ್ 2020, 7:13 IST
ಅಕ್ಷರ ಗಾತ್ರ

ವಾಷಿಂಗ್‌ಟನ್: 'ಎರಡನೇ ಹಂತದ ಕೊರೊನಾ ಲಸಿಕೆ ಎಲ್ಲರಿಗೂ ಸಿಗುವಂತಾದಾಗಕೋವಿಡ್‌ 19ನಿಂದ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಪರಿಹಾರ ದೊರೆತು ಜಗತ್ತು ಸಹಜ ಸ್ಥಿತಿಗೆ ಮರಳಲಿದೆ' ಎಂದು ಮೈಕ್ರೋಸಾಫ್ಟ್‌ ಸಂಸ್ಥೆಯ ಸಹ ಸಂಸ್ಥಾಪಕ ಬಿಲ್‌ಗೇಟ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಲ್‌ಗೇಟ್ಸ್‌, 'ಎಲ್ಲರಿಗೂ ಕೋವಿಡ್‌ 19 ಎರಡನೇ ಹಂತದ ಲಸಿಕೆ ಲಭ್ಯವಾದಾಗ ಜನಜೀವನ ಸಹಜ ಸ್ಥಿತಿಗೆ ಬರುತ್ತದೆ’ ಎಂದು ಹೇಳಿದ್ದಾರೆ.

ವಿಶ್ವದಾದ್ಯಂತ ಅನೇಕ ಕಂಪನಿಗಳು ಕೊರೊನಾ ವೈರಸ್‌ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಸ್ಪರ್ಧೆಯಲ್ಲಿರುವ ವೇಳೆಯಲ್ಲಿ ಬಿಲ್‌ಗೇಟ್ಸ್‌ ಈ ಹೇಳಿಕೆ ನೀಡಿದ್ದಾರೆ.

'ಇಷ್ಟು ಬೇಗನೆ ಲಸಿಕೆಯ ಸುರಕ್ಷತೆಕುರಿತು ಪ್ರತಿಕ್ರಿಯಿಸುವುದು ಅಸಾಧ್ಯ. ಈ ಹಂತದಲ್ಲಿ ರೋಗಕ್ಕೆ ಸಂಬಂಧಿಸಿದಂತೆ ಪ್ರತಿಕಾಯಗಳು ಮತ್ತು ಟಿ–ಸೆಲ್ ಪ್ರತಿಕ್ರಿಯೆಗಳು ಹೇಗೆ ವರ್ತಿಸುತ್ತವೆ ಎಂಬುದರ ಬಗ್ಗೆ ನಮ್ಮ ಬಳಿ ಯಾವುದೇ ದತ್ತಾಂಶಗಳಿಲ್ಲ. ಕೆಲವು ಲಸಿಕೆಗಳು ಈಗಾಗಲೇ ಪ್ರಾಯೋಗಿಕ ಹಂತದಲ್ಲಿವೆ. ಕೆಲವೇ ತಿಂಗಳಲ್ಲಿ ಪ್ರಯೋಗದ ವರದಿ ನೀಡಲಿದ್ದು, ಇದರಿಂದ, ಇಂಥ ಎಲ್ಲ ವಿಮರ್ಶಾತ್ಮಕ ಪ್ರಶ್ನೆಗಳಿಗೆ ಉತ್ತರ ಬರಲು ಆರಂಭವಾಗುತ್ತದೆ’ ಎಂದು ಹೇಳಿದ್ದಾರೆ.

'ಇವೆಲ್ಲದರ ನಡುವೆ,ಬಹುದೊಡ್ಡ ಪ್ರಮಾಣದಲ್ಲಿ, ಬೇರೆ ಬೇರೆ ವಿಧಾನದಲ್ಲಿ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ಉತ್ತಮ ಅವಕಾಶವನ್ನು ಕಲ್ಪಿಸಿದಂತಾಗುತ್ತಿದೆ’ ಎಂದು ಗೇಟ್ಸ್‌ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವಾರ, ಬಿಲ್ ಗೇಟ್ಸ್ ಅವರು ಕೋವಿಡ್ -19 ಲಸಿಕೆ ಶೀಘ್ರದಲ್ಲೇ ಸಿದ್ಧವಾಗಿ, ಸರಿಯಾದ ಪ್ರಮಾಣದಲ್ಲಿ ವಿತರಣೆಯಾದರೆ, 2021ರ ಅಂತ್ಯದ ವೇಳೆಗೆ ಶ್ರೀಮಂತ ರಾಷ್ಟ್ರಗಳು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT