ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕಪೂರ್‌ ಪೂರ್ವಜರ ಮನೆ ಮಾರಾಟಕ್ಕೆ ಒಪ್ಪದ ಮಾಲೀಕ

Last Updated 27 ಜನವರಿ 2021, 12:06 IST
ಅಕ್ಷರ ಗಾತ್ರ

ಪೆಶಾವರ: ಭಾರತೀಯ ಸಿನಿಮಾ ರಂಗದ ಖ್ಯಾತ ನಟರಾಗಿದ್ದ ರಾಜ್‌ಕಪೂರ್‌ ಅವರ ಪೂರ್ವಜರ ಇಲ್ಲಿನ ಮನೆಯನ್ನು ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಮಾರಾಟ ಮಾಡಲು ಅದರ ಮಾಲೀಕ ಹಜಿ ಅಲಿ ಸಾಬಿರ್‌ ಎನ್ನುವವರು ನಿರಾಕರಿಸಿದ್ದಾರೆ.

ಕಪೂರ್‌ ಹವೇಲಿ ಎಂದು ಖ್ಯಾತಿಯಾಗಿರುವ ಈ ಮನೆಯನ್ನು ರಾಜ್‌ಕಪೂರ್‌ ಅವರ ಅಜ್ಜ ದಿವಾನ್‌ ಬಾಶೇಶ್ವರ್‌ನಾಥ್‌ ಕಪೂರ್‌ 1922ರ ಅವಧಿಯಲ್ಲಿ ನಿರ್ಮಿಸಿದ್ದರು. ರಾಜ್‌ ಕಪೂರ್‌ ಹಾಗೂ ಅವರ ಮಾವ ತ್ರಿಲೋಕ್‌ ಕಪೂರ್‌ ಇಲ್ಲೇ ಹುಟ್ಟಿದ್ದರು. ಕಟ್ಟಡವನ್ನು ರಾಷ್ಟ್ರೀಯ ಸ್ವತ್ತು ಎಂದು ಪ್ರಾಂತೀಯ ಸರ್ಕಾರವು ಘೋಷಿಸಿದೆ.

ನಟನ ಗೌರವಾರ್ಥ ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಉದ್ದೇಶದಿಂದ, ಮನೆ ಖರೀದಿಗೆ ₹1.5 ಕೋಟಿ ಹಣವನ್ನು ಬಿಡುಗಡೆಗೊಳಿಸಲು ಖೈಬರ್‌ ಪಖ್‌ತುನ್‌ಖ್ವಾ ಸರ್ಕಾರವು ತಿಂಗಳ ಆರಂಭದಲ್ಲಿ ಬಿಡುಗಡೆಗೊಳಿಸಿತ್ತು. ‘ಈ ಆಸ್ತಿಯು ಪ್ರಮುಖ ಸ್ಥಳದಲ್ಲಿದ್ದು, ಇದಕ್ಕೆ ನಿಗದಿಪಡಿಸಿರುವ ಮೌಲ್ಯವು ಬಹಳ ಕಡಿಮೆಯಾಗಿದೆ. ₹1.5 ಕೋಟಿಗೆ ಇದನ್ನು ಮಾರಾಟ ಮಾಡಲು ಸಾಧ್ಯವೇ ಇಲ್ಲ’ ಎಂದು ಸಾಬಿರ್‌ ಅವರು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ಈ ಭಾಗದಲ್ಲಿ 112 ಚದರಡಿ ಭೂಮಿಯೂ ₹1.5 ಕೋಟಿಗೆ ದೊರೆಯುತ್ತಿಲ್ಲ. ಹೀಗಿರುವಾಗ ಅಂದಾಜು 1,350 ಚದರಡಿ ಭೂಮಿಯನ್ನು ಹೇಗೆ ₹1.5 ಕೋಟಿಗೆ ಮಾರಾಟ ಮಾಡಲಿ. ಇದರ ಸರಿಯಾದ ಮೌಲ್ಯ ₹200 ಕೋಟಿ’ ಎಂದು ಸಾಬಿರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT