ಬ್ರಿಟನ್‌ನಲ್ಲಿ ಜಪ್ತಿ ಮಾಡಿರುವ ಯುರೇನಿಯಂ ತನ್ನದಲ್ಲ ಎಂದ ಪಾಕಿಸ್ತಾನ

ಇಸ್ಲಾಮಾಬಾದ್: ಲಂಡನ್‌ನ ಹೀಥ್ರೂ ವಿಮಾನನಿಲ್ದಾಣದಲ್ಲಿ ಅಧಿಕಾರಿಗಳು ಇತ್ತೀಚಿಗೆ ಜಪ್ತಿ ಮಾಡಿರುವ ಯುರೇನಿಯಂ ಒಳಗೊಂಡಿದ್ದ ಪ್ಯಾಕೇಜ್ ಕರಾಚಿಯಿಂದ ಬಂದದ್ದು ಎಂಬುದನ್ನು ಅಲ್ಲಗಳೆದಿರುವ ಪಾಕಿಸ್ತಾನ, ಇದು ವಾಸ್ತವವಲ್ಲ ಎಂದು ಪ್ರತಿಪಾದಿಸಿದೆ.
‘ಕಳೆದ ತಿಂಗಳು ಹೀಥ್ರೂ ವಿಮಾನ ನಿಲ್ದಾಣದಲ್ಲಿ ಯುರೇನಿಯಂ ಅನ್ನು ಜಪ್ತಿ ಮಾಡಲಾಗಿದ್ದು, ಬ್ರಿಟನ್‌ನ ಭಯೋತ್ಪಾದನ ನಿಗ್ರಹ ದಳದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಬಿಬಿಸಿ ಬುಧವಾರ ವರದಿ ಮಾಡಿದೆ.
ಈ ಸಂಬಂಧ ಮೊದಲು ವರದಿ ಮಾಡಿದ್ದ ‘ಸನ್’ ದೈನಿಕವು, ‘ಯುರೇನಿಯಂ ಪಾಕಿಸ್ತಾನದಿಂದ ಬಂದಿದೆ’ ಎಂದು ಬರೆದಿತ್ತು.
ಈ ವರದಿಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಕಚೇರಿಯ ವಕ್ತಾರರಾದ ಮುಮ್ತಾಜ್ ಜಹ್ರಾ, ‘ಇದು ವಾಸ್ತವವಲ್ಲ. ಅದಾಗ್ಯೂ ಈ ಕುರಿತು ಬ್ರಿಟನ್ ಇಲ್ಲಿಯವರೆಗೆ ಪಾಕ್ ಜತೆಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ’ ಎಂದು ತಿಳಿಸಿದ್ದಾರೆ. ಮುಮ್ತಾಜ್ ಅವರ ಹೇಳಿಕೆಯನ್ನು ಆಧರಿಸಿ ಪಾಕ್‌ನ ‘ಡಾನ್’ ದೈನಿಕ ಗುರುವಾರ ವರದಿ ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.