ಗುರುವಾರ , ಅಕ್ಟೋಬರ್ 29, 2020
20 °C

ಚೀನಾ ಮೂಲದ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಪಾಕಿಸ್ತಾನ‌ ಒಪ್ಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌: ಕೋವಿಡ್‌–19 ಚಿಕಿತ್ಸೆಗಾಗಿ ಚೀನಾದ ಕಂಪನಿಯೊಂದರ ಸಹಯೋಗದಲ್ಲಿ  ಅಭಿವೃದ್ಧಿಪಡಿಸಿರುವ ಸಂಭಾವ್ಯ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ಪಾಕಿಸ್ತಾನದ ಔಷಧ ನಿಯಂತ್ರಕ ಪ್ರಾಧಿಕಾರ ಒಪ್ಪಿಗೆ ನೀಡಿದೆ.

‘ಪಾಕಿಸ್ತಾನದ ಔಷಧ ನಿಯಂತ್ರಕ ಪ್ರಾಧಿಕಾರವು(ಡಿಆರ್‌ಎಪಿ) ಚೀನಾದ ಬೀಜಿಂಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಯೋಟೆಕ್ನಾಲಜಿ ಸಹಯೋಗದಲ್ಲಿ ಕ್ಯಾನ್‌ಸಿನೊಬಯೋ ಅಭಿವೃದ್ಧಿಪಡಿಸಿರುವ ಅಡೆನೊವೈರಸ್‌ ಟೈಪ್‌–5 ವೆಕ್ಟರ್‌ (Ad5-nCoV) ಹೆಸರಿನ ಸಂಭಾವ್ಯ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ನ 3ನೇ ಹಂತಕ್ಕೆ ಒಪ್ಪಿಗೆ ನೀಡಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ(ಎನ್‌ಐಎಚ್‌) ಪ್ರಕಟಣೆಯಲ್ಲಿ ತಿಳಿಸಿದೆ. 

‘ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸಂಭಾವ್ಯ ಲಸಿಕೆಯೊಂದು ಕ್ಲಿನಿಕಲ್‌ ಟ್ರಯಲ್‌ನ ಮೂರನೇ ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಎನ್‌ಐಎಚ್‌ ತಿಳಿಸಿದೆ. ಕ್ಯಾನ್‌ಸಿನೊಬಯೊ ಈಗಾಗಲೇ ಚೀನಾ, ರಷ್ಯಾ, ಚಿಲಿಯಲ್ಲಿ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಆರಂಭಿಸಿದೆ. ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಎಜೆಎಂ ಫಾರ್ಮಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದ್ನಾನ್‌ ಹುಸೈನ್‌ ಕಳೆದ ತಿಂಗಳಷ್ಟೇ ಎನ್‌ಐಎಚ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ಎನ್‌ಐಎಚ್‌ ನಿರ್ದೇಶಕ ಮೇಜರ್‌ ಜನರಲ್‌ ಅಮೀರ್ ಇಕ್ರಮ್‌ ಉಲ್ಲೇಖಿಸಿದ್ದಾರೆ. 

ಪ್ರಯೋಗಕ್ಕೆ ಈಗಾಗಲೇ 200ಕ್ಕೂ ಅಧಿಕ ಜನರು ನೋಂದಣಿ ಮಾಡಿಕೊಂಡಿದ್ದು, 56 ದಿನಗಳಲ್ಲಿ ಪ್ರಯೋಗ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು