ಬುಧವಾರ, ಮೇ 25, 2022
27 °C

ಪಾಕ್‌–ಅಫ್ಗನ್‌ ಗಡಿಯಲ್ಲಿ ಬೇಲಿ ಅಳವಡಿಸಲು ಸಮ್ಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಗಡಿಯುದ್ದಕ್ಕೂ ಬೇಲಿ ಅಳವಡಿಸಲು ಉಭಯ ದೇಶಗಳು ಸಮ್ಮತಿಸಿದ್ದು, ಈ ಮೂಲಕ ವಿವಾದಕ್ಕೆ ತೆರೆ ಎಳೆದಿವೆ. ಗಡಿ ವಿಷಯವು ಉಭಯ ದೇಶಗಳ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು.

ಸುದ್ದಿಗಾರರ ಜೊತೆ ಮಾತನಾಡಿದ ಪಾಕ್‌ನ ಹಿರಿಯ ಅಧಿಕಾರಿಯೊಬ್ಬರು, ಬೇಲಿ ಅಳವಡಿಸುವ ಕುರಿತಂತೆ ಅಧಿಕಾರಿಗಳ ಹಂತದಲ್ಲಿಯೇ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ಹೇಳಿದರು. ಆದರೆ, ಅಧಿಕಾರಿಗಳ ಯಾವ ಹಂತದಲ್ಲಿ ಚರ್ಚೆಯಾಯಿತು ಎಂದು ಬಹಿರಂಗಪಡಿಸಿಲ್ಲ.

ಬುಧವಾರ ಗಡಿಯಲ್ಲಿ ಉಭಯ ದೇಶಗಳ ಸಿಬ್ಬಂದಿ ನಡುವೆ ವಾಗ್ವಾದ ನಡೆದಿತ್ತು. ತಾಲಿಬಾನ್‌ನ ರಕ್ಷಣಾ ಸಚಿವ ಮುಲ್ಲಾ ಯಾಕೂಬ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಶಮನಗೊಳಿಸಿದ್ದರು. ವಿವಾದವನ್ನು ಸೌಹಾರ್ದ ಮತ್ತು ಶಾಂತವಾಗಿ ಬಗೆಹರಿಸಲಾಗಿದೆ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು