ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್: ಇಂಧನ ಬೆಲೆ ಏರಿಕೆ, ಕತ್ತೆಯ ಗಾಡಿಯಲ್ಲಿ ಕಚೇರಿಗೆ ಬರಲು ಅನುಮತಿ ಕೇಳಿದ ನೌಕರ

Last Updated 3 ಜೂನ್ 2022, 11:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರವು ಮತ್ತೊಮ್ಮೆ ಇಂಧನ ಬೆಲೆಯನ್ನು ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಪ್ರಾಧಿಕಾರದ (ಸಿಎಎ) ಉದ್ಯೋಗಿಯೊಬ್ಬರು ಕತ್ತೆಯ ಗಾಡಿಯಲ್ಲಿ ಕಚೇರಿಗೆ ಬರಲು ಅನುಮತಿ ನೀಡುವಂತೆ ಕೋರಿದ್ದಾರೆ ಎಂದು ‘ಡಾನ್’ ಪತ್ರಿಕೆ ಶುಕ್ರವಾರ ವರದಿ ಮಾಡಿದೆ.

‘ಈ ಕುರಿತು ಉದ್ಯೋಗಿ ರಾಜಾ ಆಸೀಫ್‌ ಇಕ್ಬಾಲ್ ಎಂಬುವವರು, ಸಿಎಎ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಹಣದುಬ್ಬರದಿಂದಾಗಿ ಬಡವರದು ಮಾತ್ರವಲ್ಲ, ಮಧ್ಯಮ ವರ್ಗದವರ ಬೆನ್ನೂ ಮುರಿದಿದೆ. ತೈಲ ಬೆಲೆ ಏರಿಕೆಯಿಂದಾಗಿ ಸಂಸ್ಥೆಯು ಸಾರಿಗೆ ಸೌಲಭ್ಯವನ್ನು ಸ್ಥಗಿತಗೊಳಿಸಿದೆ. ಹಾಗಾಗಿ, ಕತ್ತೆಯ ಗಾಡಿಯಲ್ಲಿ ಕಚೇರಿಗೆ ಬರಲು ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ಈ ಗಾಡಿಯನ್ನು ನಿಲ್ಲಿಸಲು ಅನುಮತಿ ನೀಡಬೇಕೆಂದು ಅವರು ಕೋರಿದ್ದಾರೆ’ ಎಂದು ಪತ್ರಿಕೆ ವರದಿ ಮಾಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಎ ವಕ್ತಾರ ಸೈಫುಲ್ಲಾ ಖಾನ್, ‘ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಗೂ ಇಂಧನ ಭತ್ಯೆ ನೀಡಲಾಗುತ್ತಿದೆ. ಪಿಕ್ ಅಪ್ ಮತ್ತು ಡ್ರಾಪ್ ಜೊತೆಗೆ, ಮೆಟ್ರೊ ಬಸ್ ಸೇವೆಯೂ ಲಭ್ಯವಿದೆ. ಹೀಗಾಗಿ, ಅರ್ಜಿ ಸಲ್ಲಿಸಿರುವುದು ಸಾರ್ವಜನಿಕರ ಗಮನ ಸೆಳೆಯುವ ತಂತ್ರವಷ್ಟೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT