ಮಂಗಳವಾರ, ಜೂನ್ 28, 2022
21 °C

ಕಾಶ್ಮೀರ ವಿವಾದ; ಮುಸ್ಲಿಂ ರಾಷ್ಟ್ರಗಳ ಬೆಂಬಲ ಕೋರಲಿರುವ ಪಾಕಿಸ್ತಾನ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಕಾಶ್ಮೀರ ವಿವಾದವನ್ನು ಎತ್ತಿ ಹಿಡಿಯಲು ಮತ್ತು ಬೆಂಬಲ ಪಡೆಯುವ ಸಲುವಾಗಿ ಮುಂದಿನ ವರ್ಷ ಇಸ್ಲಾಮಾಬಾದ್‌ನಲ್ಲಿ ಮುಸ್ಲಿಂ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಕರೆಯುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಮುಲ್ತಾನ್‌ನಲ್ಲಿ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

'ದೇವರು ನನಗೆ ಸಮಯವನ್ನು ನೀಡಿದರೆ 2022 ಮಾರ್ಚ್‌ನಲ್ಲಿ ನಾನು ಇಸ್ಲಾಮಿಕ್ ಜಗತ್ತಿನ ವಿದೇಶಾಂಗ ಸಚಿವರುಗಳನ್ನು ಇಸ್ಲಾಮಾಬಾದ್‌ಗೆ ಆಹ್ವಾನಿಸಲಿದ್ದೇನೆ. ಕಾಶ್ಮೀರ ವಿವಾದದಲ್ಲಿ ಅವರನ್ನು ಒಗ್ಗೂಡಿಸಲು ಪ್ರಯತ್ನಿಸಲಿದ್ದೇನೆ' ಎಂದಿದ್ದಾರೆ.

ಇದನ್ನೂಓದಿ: 

ಇದೇ ವೇಳೆ ಪಾಕಿಸ್ತಾನದ ವಿರುದ್ಧ ಅವಮಾನಕರ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಬೇಕು. ಇಲ್ಲವಾದ್ದಲ್ಲಿ ಮಾತುಕತೆಯನ್ನು ನಿಲ್ಲಿಸಲಿದ್ದೇವೆ ಅಫ್ಗಾನಿಸ್ತಾನ ನಾಯಕರಿಗೂ ಖುರೇಷಿ ಎಚ್ಚರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ತನ್ನ ಆಂತರಿಕ ಸಮಸ್ಯೆಯನ್ನು ಬಗೆಹರಿಸುವ ಸಾಮರ್ಥ್ಯವನ್ನು ದೇಶವು ಹೊಂದಿದೆ ಎಂದು ಭಾರತ ಪದೇ ಪದೇ ಹೇಳುತ್ತಲೇ ಬಂದಿದೆ.

ನೆರೆಯ ರಾಷ್ಟ್ರದೊಂದಿಗೆ ಭಯೋತ್ಪಾದನೆ, ಹಗೆತನ ಹಾಗೂ ಹಿಂಸಾಚಾರ ರಹಿತ ಬಾಂಧವ್ಯ ವೃದ್ಧಿಯನ್ನು ಭಾರತ ಬಯಸುತ್ತಿದೆ. ಈ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಹೇಳಿದೆ.

ಏತನ್ಮಧ್ಯೆ ಹೇಳಿಕೆ ನೀಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರದಲ್ಲಿ ಹಿಂದಿನ ಸ್ಥಿತಿಯನ್ನು ಮರಳಿ ಸ್ಥಾಪಿಸಲು ಭಾರತ ಪ್ರಯತ್ನಿಸಿದರೆ ಮಾತುಕತೆ ಪುನರಾರಂಭಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು