ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍ಪಾಕಿಸ್ತಾನದಲ್ಲಿ ಭಾರಿ ಮಳೆ, ಪ್ರವಾಹ: ಮೃತರ ಸಂಖ್ಯೆ 1,136ಕ್ಕೆ ಏರಿಕೆ

Last Updated 30 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಧಾರಾಕಾರ ಮಳೆ, ಅದರಿಂದ ಉಂಟಾದ ಪ್ರವಾಹದ ಪರಿಣಾಮ ಪಾಕಿಸ್ತಾನದಲ್ಲಿ ತೀವ್ರವಾಗಿದ್ದು, ಮೃತರ ಸಂಖ್ಯೆ 1,136ಕ್ಕೆ ಏರಿದೆ. ಒಟ್ಟು 1,634 ಜನರು ಗಾಯಗೊಂಡಿದ್ದಾರೆ. ಮೂರು ಕೋಟಿಗೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಪ್ರವಾಹ ಪೀಡಿತರ ರಕ್ಷಣೆ ಮತ್ತು ಪರಿಹಾರ ಕಾರ್ಯ ಚುರುಕಿನಿಂದ ನಡೆದಿದೆ. ಪ್ರವಾಹದಿಂದ ಆಗಿರುವ ಹಾನಿಯನ್ನು ಸರಿಪಡಿಸಲು 10 ಬಿಲಿಯನ್‌ಗೂ ಹೆಚ್ಚಿನ ಹಣಕಾಸು ಅಗತ್ಯವಿದೆ ಎಂದು ಪಾಕಿಸ್ತಾನದ ಒಳಾಡಳಿತ ಸಚಿವ ಅಶಾನ್‌ ಇಕ್ಬಾಲ್ ಹೇಳಿದ್ದಾರೆ.

ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ಅವರು, ‘ಈ ಬಾರಿ ವಾಡಿಕೆಗಿಂತಲೂ ನಿರೀಕ್ಷೆಯನ್ನು ಮೀರಿದ ಮಳೆಯಾಗಿದೆ. ಒಟ್ಟು 72 ಜಿಲ್ಲೆಗಳಲ್ಲಿ ಪ್ರವಾಹದ ಪರಿಣಾಮ ತೀವ್ರವಾಗಿದೆ. 3.30 ಕೋಟಿ ಜನರು ಸಂತ್ರಸ್ತರಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಅತಂತ್ರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಹೆಚ್ಚಿನವರು ಆಹಾರ, ನೀರು ಮತ್ತು ಆಸರೆಯನ್ನು ಕಳೆದುಕೊಂಡಿದ್ದು, ಆತಂಕದಲ್ಲಿ ದಿನ ದೂಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಜಂಟಿ ಮನವಿ: ಪಾಕಿಸ್ತಾನದಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಾರ್ಯಗಳಿಗಾಗಿ 160 ಮಿಲಿಯನ್‌ ಡಾಲರ್‌ ನೆರವು ಅಗತ್ಯವಿದ್ದು, ವಿಶ್ವ ಸಮುದಾಯವು ಸ್ಪಂದಿಸಬೇಕು ಎಂದು ಪಾಕಿಸ್ತಾನ ಮತ್ತು ವಿಶ್ವಸಂಸ್ಥೆಯು ಮಂಗಳವಾರ ಜಂಟಿಯಾಗಿ ಮನವಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT