ಸೋಮವಾರ, ಜನವರಿ 25, 2021
27 °C

ಮಗು ಬದುಕುಳಿಯಲು ನೆರವಾದ ತಾಳೆ ಮರ

ಎಪಿ Updated:

ಅಕ್ಷರ ಗಾತ್ರ : | |

Prajavani

ಮಿಯಾಮಿ:  ನಾಲ್ಕು ಅಂತಸ್ತಿನಿಂದ ಕೆಳಗೆ ಬಿದ್ದ ಮಗುವೊಂದು ತಾಳೆ ಮರದ ಮೇಲೆ ಬಿದ್ದು ನಂತರ ಪೊದೆಗಳಲ್ಲಿ ಸಿಲುಕಿ ‍ಬದುಕುಳಿದ ಘಟನೆ ಮಿಯಾಮಿಯಲ್ಲಿ ನಡೆದಿದೆ.

ಸೋಮವಾರ ಬೆಳಿಗ್ಗೆ ಎರಡು ವರ್ಷದ ಮಗು ನಾಲ್ಕು ಅಂತಸ್ತಿನ ಕಟ್ಟಡದ ಕಿಟಕಿಯಿಂದ ಕೆಳಗೆ ಬಿದ್ದಿದೆ. ಈ ವೇಳೆ ಕಿಟಕಿಯ ಕೆಳಗಿದ್ದ ತಾಳೆ ಮರಕ್ಕೆ ಮಗು ಸಿಲುಕಿ ನಂತರ ಕೆಳಗೆ ಪೊದೆಗಳ ಮೇಲೆ ಬಿದ್ದಿದೆ. ಇದರಿಂದಾಗಿ ಮಗು ಕೆಳಕ್ಕೆ ಬೀಳುವ ವೇಗ ಕಡಿಮೆಯಾಗಿದೆ.  ಮಗು ಭೂಮಿಗೆ ಸ್ಪರ್ಶಿಸದೆ ಪೊದೆಗಳಲ್ಲಿ ಸಿಲುಕಿತ್ತು ಎಂದು ಮಿಯಾಮಿ ಅಗ್ನಿ ಶಾಮಕ ದಳದ ಕ್ಯಾಪ್ಟನ್‌ ಇಗ್ನೇಷಿಯಸ್ ಕ್ಯಾರೊಲ್ ಅವರು ತಿಳಿಸಿದರು.

ಸದ್ಯ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಗು ಮನೆಯ ಕಿಟಕಿಯಿಂದ ಕೆಳಗೆ ಹೇಗೆ ಬಿತ್ತು. ಇದಕ್ಕೆ ಮಗುವಿನ ಪೋಷಕರು ಜವಾಬ್ದಾರಿಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಿಯಾಮಿ ಪೊಲೀಸ್‌ ಅಧಿಕಾರಿ ಫ್ರೆಡ್ಡಿ ಕ್ರೂಜ್ ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು