ಸೋಮವಾರ, ಜೂನ್ 21, 2021
29 °C

ಮಕ್ಕಳಿಗೂ ಕೋವಿಡ್‌ ಲಸಿಕೆ ನೀಡಲು ಅನುಮತಿ ಕೋರಿ ಫೈಜರ್–ಬಯೊಎನ್‌ಟೆಕ್ ಮನವಿ

ಎಪಿ Updated:

ಅಕ್ಷರ ಗಾತ್ರ : | |

ಬ್ರಸೆಲ್ಸ್: ಹನ್ನೆರಡರಿಂದ 15 ವರ್ಷ ವಯಸ್ಸಿನವರಿಗೂ ಕೋವಿಡ್ ಲಸಿಕೆ ನೀಡಲು ಅನುಮತಿ ನೀಡುವಂತೆ ಫೈಜರ್–ಬಯೊಎನ್‌ಟೆಕ್ ಕಂಪನಿಯು ಯುರೋಪ್‌ ಒಕ್ಕೂಟದ ಔಷಧ ನಿಯಂತ್ರಕರಿಗೆ ಮನವಿ ಮಾಡಿದೆ.

ಕೋವಿಡ್ ಲಸಿಕೆ ನೀಡಿಕೆ ಅನುಮತಿಯನ್ನು ಕಡಿಮೆ ಅಪಾಯ ಹೊಂದಿರುವ ವಯಸ್ಸಿನವರಿಗೂ ವಿಸ್ತರಿಸಬೇಕು ಎಂದು ಕಂಪನಿ ಮನವಿ ಮಾಡಿದೆ.

ಓದಿ: 

2,000ಕ್ಕೂ ಹೆಚ್ಚು ಮಂದಿ ಹದಿಹರೆಯದವರ ಮೇಲೆ ನಡೆಸಿದ ಅಧ್ಯಯನದಲ್ಲಿ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ಕಂಡುಬಂದಿದೆ. ಲಸಿಕೆ ನೀಡಿಕೆಯಿಂದ ಮಕ್ಕಳಿಗೆ ಎರಡು ವರ್ಷಗಳವರೆಗೆ ಸುರಕ್ಷತೆ ದೊರೆಯಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಲಸಿಕೆ ನೀಡಿಕೆ ಅನುಮತಿಯನ್ನು 12–15ರ ವಯೋಮಾನದವರಿಗೂ ವಿಸ್ತರಿಸಬೇಕು ಎಂದು ಫೈಜರ್–ಬಯೊಎನ್‌ಟೆಕ್ ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರಕ್ಕೆ (ಎಫ್‌ಡಿಎ) ಈ ಹಿಂದೆಯೇ ಮನವಿ ಸಲ್ಲಿಸಿತ್ತು.

‌ಫೈಜರ್–ಬಯೊಎನ್‌ಟೆಕ್ ಕೋವಿಡ್‌ ಲಸಿಕೆಗೆ ಯುರೋಪ್ ಒಕ್ಕೂಟವು ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು. ಯುರೋಪ್ ಒಕ್ಕೂಟದ ದೇಶಗಳಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡಲು ಆಗ ಅನುಮತಿ ನೀಡಲಾಗಿತ್ತು.

ಓದಿ: 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು