ಕಠ್ಮಂಡು: ಪ್ರಧಾನಿ ಕೆ.ಪಿ.ಶರ್ಮಾ ಒಲಿ ಅವರು 20 ಜನ ಸಚಿವರನ್ನು ನೇಮಕ ಮಾಡಿರುವುದು ಅಸಾಂವಿಧಾನಿಕ ಎಂದು ನೇಪಾಳ ಸುಪ್ರೀಂಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

ಸಂಸತ್ ವಿಸರ್ಜನೆಗೊಳಿಸಿದ ನಂತರ ಪ್ರಧಾನಿ ಒಲಿ ಅವರು ಎರಡು ಬಾರಿ ಮಾಡಿದ್ದ ಸಂಪುಟ ವಿಸ್ತರಣೆ ಅಸಿಂಧುಗೊಂಡಂತಾಗಿದೆ. ಇದರೊಂದಿಗೆ ನೇಪಾಳದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ಈಗ ಮತ್ತಷ್ಟೂ ಜಟಿಲಗೊಂಡಂತಾಗಿದೆ.

ಮುಖ್ಯನ್ಯಾಯಮೂರ್ತಿ ಚೋಳೇಂದ್ರ ಶಂಷೇರ್ ರಾಣಾ ಹಾಗೂ ನ್ಯಾಯಮೂರ್ತಿ ಪ್ರಕಾಶಕುಮಾರ್ ಧುಂಗಾನಾ ಅವರಿರುವ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.

ಈಗ, ಪ್ರಧಾನಿ ಒಲಿ ಸೇರಿದಂತೆ ಐವರು ಸಚಿವರು ಸಂಪುಟದಲ್ಲಿ ಉಳಿದುಕೊಂಡಿದ್ದಾರೆ. ಇಬ್ಬರು ಉಪಪ್ರಧಾನಿಗಳಾದ ರಾಜೇಂದ್ರ ಮಹತೊ (ಜನತಾ ಸಮಾಜವಾದಿ ಪಾರ್ಟಿ) ಹಾಗೂ ರಘುವೀರ್ ಮಹಾಸೇಠ್ (ಪ್ರಧಾನಿ ಒಲಿ ನೇತೃತ್ವದ ಸಿಪಿಎನ್–ಯುಎಂಎಲ್ ಪಾರ್ಟಿ) ಅಧಿಕಾರ ಕಳೆದುಕೊಂಡಿರುವ ಪ್ರಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.